ಮುಂಬೈ: ಸ್ಥಳೀಯವಾಗಿ ಅಲ್ಲಲ್ಲಿ ಜಾರಿಗೆ ಬರುತ್ತಿರುವ ಲಾಕ್‌ಡೌನ್‌ಗಳು ಆರ್ಥಿಕ ಚಟುವಟಿಕೆಗಳ ಮೇಲೆ ಈಗಾಗಲೇ ಪರಿಣಾಮ ಬೀರಲಾರಂಭಿಸಿವೆ ಎಂದು ರೇಟಿಂಗ್ಸ್ ಸಂಸ್ಥೆ ಕ್ರಿಸಿಲ್ ಹೇಳಿದೆ.
ಕೋವಿಡ್ ಪ್ರಕರಣಗಳು ಹೆಚ್ಚುತ್ತಲೇ ಇದ್ದು, ಹಲವು ರಾಜ್ಯಗಳು ಜನರ ಸಂಚಾರ ಮತ್ತು ವಾಣಿಜ್ಯ ಚಟುವಟಿಕೆಗಳ ಮೇಲೆ ಸ್ಥಳೀಯವಾಗಿ ನಿರ್ಬಂಧ ಹೇರುತ್ತಿವೆ. ಇದರ ಪರಿಣಾಮವಾಗಿ ವಿದ್ಯುತ್ ಬಳಕೆ ಮತ್ತು ಜಿಎಸ್‌ಟಿ ಇ–ವೇಬಿಲ್ ಸಂಗ್ರಹ ಈಗಾಗಲೇ ಕಡಿಮೆ ಆಗಿದೆ. ಇದು ಆರ್ಥಿಕತೆಯ ಮೇಲೆ ಕಠಿಣ ಪರಿಣಾಮ ಉಂಟುಮಾಡಬಹುದು ಎಂದು ಕ್ರಿಸಿಲ್ ತನ್ನ ವರದಿಯಲ್ಲಿ ಎಚ್ಚರಿಕೆ ನೀಡಿದೆ.
ಉತ್ಪಾದನೆ ಮತ್ತು ನಿರ್ಮಾಣ ಚಟುವಟಿಕೆಗಳು ನಡೆದಿವೆ. ಬಹುತೇಕ ರಾಜ್ಯಗಳಲ್ಲಿ ಪರಸ್ಪರ ಅಂತರದೊಂದಿಗೆ ಪ್ರಯಾಣ ಮತ್ತು ಮನರಂಜನಾ ಸೇವೆಗಳಿಗೂ ಅನುಮತಿ ನೀಡಲಾಗಿದೆ ಎನ್ನುವುದು ತುಸು ಸಮಾಧಾನದ ವಿಷಯ. ಆದರೆ ಜನರಿಗೆ ಲಸಿಕೆ ನೀಡುವ ಸಂಖ್ಯೆಯಲ್ಲಿ ಇಳಿಕೆ ಕಂಡುಬರುತ್ತಿರುವುದು ಆತಂಕದ ವಿಷಯ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.