ADVERTISEMENT

LPG Price Drop: ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ದರ ₹ 41 ಇಳಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಏಪ್ರಿಲ್ 2025, 3:00 IST
Last Updated 1 ಏಪ್ರಿಲ್ 2025, 3:00 IST
<div class="paragraphs"><p>ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ </p></div>

ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್

   

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ವಾಣಿಜ್ಯ ಬಳಕೆಯ ಸಿಲಿಂಡರ್‌ ಮತ್ತು ವಿಮಾನ ಇಂಧನ (ಎಟಿಎಫ್‌) ದರವನ್ನು ಇಳಿಕೆ ಮಾಡಿವೆ. ಹೊಸ ದರವು ಮಂಗಳವಾರದಿಂದ ಜಾರಿಗೆ ಬಂದಿದೆ.

19 ಕೆ.ಜಿ ತೂಕದ ಸಿಲಿಂಡರ್‌ ಬೆಲೆಯಲ್ಲಿ ₹41 ಇಳಿಕೆಯಾಗಿದೆ. ದೆಹಲಿಯಲ್ಲಿ ಸಿಲಿಂಡರ್‌ ದರ ₹1,762 ಆಗಿದೆ. ಮುಂಬೈನಲ್ಲಿ ₹1,713, ಕೋಲ್ಕತ್ತದಲ್ಲಿ ₹1,868 ಮತ್ತು ಚೆನ್ನೈನಲ್ಲಿ ₹1,921 ಇದೆ. ಗೃಹ ಬಳಕೆಯ 14 ಕೆ.ಜಿ ತೂಕದ ಸಿಲಿಂಡರ್‌ ದರವು ಯಥಾಸ್ಥಿತಿಯಲ್ಲಿದ್ದು, ₹803 ಇದೆ.

ADVERTISEMENT

ವಿಮಾನ ಇಂಧನ ಬೆಲೆ ಇಳಿಕೆ: ವಿಮಾನಗಳಲ್ಲಿ ಬಳಸುವ ಇಂಧನ ದರವು ಪ್ರತಿ ಕಿಲೋ ಲೀಟರ್‌ಗೆ (1 ಸಾವಿರ ಲೀಟರ್) ₹5,870 (ಶೇ 6.1) ಇಳಿಕೆಯಾಗಿದೆ. ದೆಹಲಿಯಲ್ಲಿ ₹89,441 ಆಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಇಂಧನ ದರ ಹಾಗೂ ವಿದೇಶಿ ವಿನಿಮಯ ದರಕ್ಕೆ ಅನುಗುಣವಾಗಿ ತೈಲ ಮಾರಾಟ ಕಂಪನಿಗಳು ಪ್ರತಿ ತಿಂಗಳು ದರ ಪರಿಷ್ಕರಣೆ ಮಾಡುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.