ADVERTISEMENT

ಚೀನಾ ಕಂಪನಿಗಳ ₹5020 ಕೋಟಿ ಮೊತ್ತದ ಒಪ್ಪಂದಕ್ಕೆ ಮಹಾರಾಷ್ಟ್ರ ಸರ್ಕಾರದ ತಡೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2020, 14:24 IST
Last Updated 22 ಜೂನ್ 2020, 14:24 IST
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆ
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆ    

ಮುಂಬೈ: ಚೀನಾದ ಮೂರು ಕಂಪನಿಗಳೊಂದಿಗೆ ಮಾಡಿಕೊಂಡಿದ್ದ ₹5020 ಕೋಟಿ ಮೊತ್ತದ ಒಪ್ಪಂದಗಳನ್ನು ಮಹಾರಾಷ್ಟ್ರ ಸರ್ಕಾರ ಸೋಮವಾರ ತಡೆಹಿಡಿದಿದೆ.

ಚೀನಾದ ಹೆಂಗ್ಲಿ ಎಂಜಿನಿಯರಿಂಗ್, ಪಿಎಂಐ ಎಲೆಕ್ಟ್ರೋ ಮೊಬಿಲಿಟಿ ಸೊಲ್ಯೂಷನ್ಸ್ ಫೋಟಾನ್ ಮತ್ತು ಗ್ರೇಟ್ ವಾಲ್ ಮೋಟಾರ್ಸ್‌ ಕಂಪನಿ ಜಂಟಿ ಸಹಯೋಗದಲ್ಲಿ ಪುಣೆಯ ತಲೇಗಾಂವ್‌ನಲ್ಲಿ ಹೂಡಿಕೆ ಮಾಡಲು ಮಹಾರಾಷ್ಟ್ರ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದ್ದವು.

ಈ ಮೂರು ಕಂಪನಿಗಳ ಒಪ್ಪಂದದ ಮೊತ್ತ ₹5020 ಕೋಟಿಯಾಗಿದ್ದು, ಸದ್ಯ ಅದನ್ನು ತಡೆಹಿಡಿದಿರುವುದಾಗಿ ಕೈಗಾರಿಕಾ ಸಚಿವ ಸುಭಾಷ್‌ ದೇಸಾಯಿ ಅವರು ಸೋಮವಾರ ಪ್ರಕಟಿಸಿದ್ದಾರೆ.

ಲಡಾಕ್‌ನ ಗಾಲ್ವಾನ್‌ ನದಿ ಕಣಿವೆಯಲ್ಲಿ ಇತ್ತೀಚೆಗೆ ಚೀನಾ ಮತ್ತು ಭಾರತದ ನಡುವೆ ಘರ್ಷಣೆ ಸಂಭವಿಸಿತ್ತು. ಆಗಿನಿಂದಲೂ ದೇಶದಲ್ಲಿ ಚೀನಾ ಕಂಪನಿಗಳಿಗೆ ಅಂಕುಶ ಹಾಕುವ, ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸುವ ಕೂಗು ಜೋರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.