ADVERTISEMENT

ಮಹೀಂದ್ರ: ₹5,021 ಕೋಟಿ ಲಾಭ

ಪಿಟಿಐ
Published 11 ಫೆಬ್ರುವರಿ 2026, 15:28 IST
Last Updated 11 ಫೆಬ್ರುವರಿ 2026, 15:28 IST
ಮಹೀಂದ್ರ ಆ್ಯಂಡ್‌ ಮಹೀಂದ್ರ
ಮಹೀಂದ್ರ ಆ್ಯಂಡ್‌ ಮಹೀಂದ್ರ   

ನವದೆಹಲಿ: ವಾಹನ ತಯಾರಿಕಾ ಕಂಪನಿ ಮಹೀಂದ್ರ ಆ್ಯಂಡ್‌ ಮಹೀಂದ್ರ ಪ್ರಸಕ್ತ ಆರ್ಥಿಕ ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ₹5,021 ಕೋಟಿ ತೆರಿಗೆ ನಂತರದ ಲಾಭ (ಪಿಎಟಿ) ಗಳಿಸಿದೆ.

ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ಕಂಪನಿಯು ₹3,624 ಕೋಟಿ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಲಾಭದ ಪ್ರಮಾಣದಲ್ಲಿ ಶೇ 38.54ರಷ್ಟು ಹೆಚ್ಚಳವಾಗಿದೆ ಎಂದು ಕಂಪ‍ನಿಯು ಬುಧವಾರ ಷೇರುಪೇಟೆಗೆ ತಿಳಿಸಿದೆ.

ಪ್ರಯಾಣಿಕ ವಾಹನ ಮತ್ತು ಕೃಷಿ ವಲಯದ ವಾಹನಗಳ ಮಾರಾಟದಲ್ಲಿ ಹೆಚ್ಚಳವಾಗಿದೆ. ಇದು ಒಟ್ಟಾರೆ ವಾಹನಗಳ ಮಾರಾಟ ಹೆಚ್ಚಳವಾಗಲು ಕಾರಣ ಎಂದು ತಿಳಿಸಿದೆ.

ADVERTISEMENT

ಕಂಪನಿಯ ವರಮಾನವು ₹41,464 ಕೋಟಿಯಿಂದ ₹51,579 ಕೋಟಿಗೆ ಹೆಚ್ಚಳವಾಗಿದೆ. ಇದೇ ಮೊದಲ ಬಾರಿಗೆ ಕಂಪನಿಯ ವರಮಾನವು ₹50 ಸಾವಿರ ಕೋಟಿ ದಾಟಿದೆ. ವೆಚ್ಚವು ₹37,096 ಕೋಟಿಯಿಂದ ₹41,464 ಕೋಟಿಗೆ ಏರಿಕೆಯಾಗಿದೆ. 

ಡಿಸೆಂಬರ್ ತ್ರೈಮಾಸಿಕದಲ್ಲಿ ಕಂಪನಿಯ ಪ್ರಯಾಣಿಕ ವಾಹನಗಳ ಮಾರಾಟದಲ್ಲಿ ಶೇ 23ರಷ್ಟು ಹೆಚ್ಚಳವಾಗಿದ್ದು, 3.02 ಲಕ್ಷ ವಾಹನಗಳು ಮಾರಾಟವಾಗಿವೆ. ಕೃಷಿ ವಾಹನಗಳ ಮಾರಾಟದಲ್ಲಿ ಸಹ ಶೇ 23ರಷ್ಟು ಏರಿಕೆಯಾಗಿದ್ದು, 1.5 ಲಕ್ಷ ವಾಹನಗಳು ಮಾರಾಟವಾಗಿವೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.