ADVERTISEMENT

ಮಹೀಂದ್ರಾ ಲಾಭ ಇಳಿಕೆ

ಪಿಟಿಐ
Published 10 ನವೆಂಬರ್ 2020, 11:12 IST
Last Updated 10 ನವೆಂಬರ್ 2020, 11:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಮಹೀಂದ್ರಾ ಆ್ಯಂಡ್ ಮಹೀಂದ್ರಾ ಕಂಪನಿಯ ತೆರಿಗೆ ಪಾವತಿಸಿದ ನಂತರದ ಲಾಭವು ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಶೇ 88ರಷ್ಟು ಇಳಿಕೆಯಾಗಿದ್ದು ₹ 162 ಕೋಟಿಗೆ ತಲುಪಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ತೆರಿಗೆ ಪಾವತಿಸಿದ ನಂತರದ ಲಾಭ ₹ 1,355 ಕೋಟಿ ಲಾಭ ಗಳಿಸಿತ್ತು.

ಮಾರಾಟ ಇಳಿಕೆ ಆಗಿರುವುದರಿಂದ ಲಾಭದಲ್ಲಿ ಕುಸಿತ ಕಂಡಿದೆ. ತ್ರೈಮಾಸಿಕ ಅವಧಿಯಲ್ಲಿ87,332 ವಾಹನಗಳನ್ನು ಮಾರಾಟ ಮಾಡಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿನ ಮಾರಾಟ 1.10 ಲಕ್ಷ ಇತ್ತು. ಇದಕ್ಕೆ ಹೋಲಿಸಿದರೆ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿನ ಮಾರಾಟ ಶೇ 21ರಷ್ಟು ಇಳಿಕೆಯಾಗಿದೆ ಎಂದು ಕಂಪನಿ ತಿಳಿಸಿದೆ.

ತ್ರೈಮಾಸಿಕದಲ್ಲಿ ಕಂಪನಿಯ ವರಮಾನ ಶೇ 6 ರಷ್ಟು ಹೆಚ್ಚಾಗಿದ್ದು ₹ 10,935 ಕೋಟಿಗಳಿಂದ ₹ 11,590 ಕೋಟಿಗಳಿಗೆ ಏರಿಕೆಯಾಗಿದೆ ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.