ADVERTISEMENT

ಮಾರುತಿ ನಿವ್ವಳ ಲಾಭ ₹ 1,489 ಕೋಟಿ

ಪಿಟಿಐ
Published 31 ಜನವರಿ 2019, 20:00 IST
Last Updated 31 ಜನವರಿ 2019, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ), ಡಿಸೆಂಬರ್‌ ತ್ರೈಮಾಸಿಕದಲ್ಲಿ ₹ 1,489 ಕೋಟಿ ನಿವ್ವಳ ಲಾಭ ಗಳಿಸಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿನ ₹ 1,799 ಕೋಟಿಗೆ ಹೋಲಿಸಿದರೆ, ಲಾಭದ ಪ್ರಮಾಣವು ಶೇ 17ರಷ್ಟು ಕಡಿಮೆಯಾಗಿದೆ. ಸತತ ಎರಡನೆ ತ್ರೈಮಾಸಿಕದಲ್ಲಿ ಸಂಸ್ಥೆಯ ಲಾಭದ ಪ್ರಮಾಣ ಕುಸಿದಿದೆ. ಐದು ವರ್ಷಗಳಲ್ಲಿನ ಲಾಭದ ತೀವ್ರ ಕುಸಿತವೂ ಇದಾಗಿದೆ.

ಹಬ್ಬದ ದಿನಗಳಲ್ಲಿ ನಿರೀಕ್ಷೆಗಿಂತ ಕಡಿಮೆ ಸಂಖ್ಯೆಯಲ್ಲಿ ವಾಹನಗಳು ಮಾರಾಟ ಆಗಿರುವುದು, ಅನುಕೂಲಕರವಲ್ಲದ ವಿದೇಶಿ ವಿನಿಮಯ ದರ, ಮಾರುಕಟ್ಟೆ ಮತ್ತು ಮಾರಾಟ ವೆಚ್ಚದಲ್ಲಿನ ಹೆಚ್ಚಳ ಮತ್ತಿತರ ಕಾರಣಗಳಿಂದಾಗಿ ಮೂರನೇ ತ್ರೈಮಾಸಿಕದಲ್ಲಿನ ಹಣಕಾಸು ಸಾಧನೆಯು ಕಡಿಮೆಯಾಗಿದೆ ಎಂದು ದೇಶದ ಅತಿದೊಡ್ಡ ಕಾರ್‌ ತಯಾರಿಕಾ ಸಂಸ್ಥೆಯಾಗಿರುವ ‘ಎಂಎಸ್‌ಐ’ ತಿಳಿಸಿದೆ. ಅಕ್ಟೋಬರ್‌ – ಡಿಸೆಂಬರ್ ಅವಧಿಯಲ್ಲಿನ ಒಟ್ಟಾರೆ ವರಮಾನ ₹ 20,585 ಕೋಟಿಗಳಷ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT