ADVERTISEMENT

ಮಾರುತಿ ಕಾರು ಮಾರಾಟ ಮೇಳ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2023, 18:42 IST
Last Updated 18 ಮಾರ್ಚ್ 2023, 18:42 IST
ಹುಬ್ಬಳ್ಳಿಯ ವಿದ್ಯಾನಗರದಲ್ಲಿ ಇರುವ ಹಬೀಬ್‌ ಮೈದಾನದಲ್ಲಿ ನಡೆದ ಕಾರು ಮೇಳ
ಹುಬ್ಬಳ್ಳಿಯ ವಿದ್ಯಾನಗರದಲ್ಲಿ ಇರುವ ಹಬೀಬ್‌ ಮೈದಾನದಲ್ಲಿ ನಡೆದ ಕಾರು ಮೇಳ   

ಬೆಂಗಳೂರು: ಮಾರುತಿ ಸುಜುಕಿ ಇಂಡಿಯಾ ಕಂಪನಿಯು ಬೆಂಗಳೂರು, ಮಂಗಳೂರು, ಮೈಸೂರು ಮತ್ತು ಹುಬ್ಬಳ್ಳಿಯಲ್ಲಿ ಶುಕ್ರವಾರದಿಂದ ಭಾನುವಾರದವರೆಗೆ ಮೆಗಾ ಕಾರ್‌ ಫೆಸ್ಟಿವಲ್‌ ಆಯೋಜಿಸಿದೆ.

ಪ್ರತಿ ಗ್ರಾಹಕರ ಬಜೆಟ್‌ಗೆ ಹೊಂದುವಂತೆ ಹ್ಯಾಚ್‌ಬ್ಯಾಕ್‌ನಿಂದ ಎಸ್‌ಯುವಿವರೆಗೆ ಸೆಕೆಂಡ್‌ ಹ್ಯಾಂಡ್‌ ಕಾರುಗಳು ಇಲ್ಲಿ ಲಭ್ಯ ಇರುವುದರಿಂದ ಮೇಳವು ಹೆಚ್ಚಿನ ಜನರನ್ನು ಆಕರ್ಷಿಸುತ್ತಿದೆ. ಎಲ್ಲಾ ಮಾದರಿಗಳಿಗೂ ಸುಲಭವಾಗಿ ಹಣಕಾಸಿನ ನೆರವು ಮತ್ತು ವಿಶೇಷ ಕೊಡುಗೆಗಳು ಲಭ್ಯವಿವೆ. ಗ್ರಾಹಕರು ಹೊಸ ಕಾರು ಖರೀದಿಸುವುದಲ್ಲದೆ ಹಳೆಯ ಕಾರನ್ನು ಹೊಸ ಕಾರಿನೊಂದಿಗೆ ಬದಲಾಯಿಸಿಕೊಳ್ಳುವ (ಎಕ್ಸ್‌ಚೇಂಜ್‌) ಅವಕಾಶ ಕೂಡಾ ಕಲ್ಪಿಸಲಾಗಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರಿನ ಉತ್ತರಹಳ್ಳಿಯಲ್ಲಿ ಪ್ಯಾಂಟಲೂನ್ಸ್ ಮಳಿಗೆ ಎದುರು, ಮಂಗಳೂರಿನಲ್ಲಿ ಅತ್ತಾವರ ಕಟ್ಟೆ ಬಳಿ, ಹುಬ್ಬಳ್ಳಿಯ ವಿದ್ಯಾನಗರದಲ್ಲಿ ಇರುವ ಹಬೀಬ್‌ ಮೈದಾನದಲ್ಲಿ, ಮೈಸೂರಿನಲ್ಲಿ ಬಲಮುರಿ ಗಣಪತಿ ದೇವಸ್ಥಾನದ ಬಳಿಯ ಮೈದಾನದಲ್ಲಿ ಈ ಕಾರ್‌ ಫೆಸ್ಟಿವಲ್‌ ನಡೆಯುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.