ADVERTISEMENT

ಮ್ಯಾಕ್ಸ್ ಲೈಫ್ ಸ್ಮಾರ್ಟ್ ಸೆಕ್ಯೂರ್ ಪ್ಲಸ್ ಪ್ಲಾನ್

​ಪ್ರಜಾವಾಣಿ ವಾರ್ತೆ
Published 2 ಮೇ 2021, 4:10 IST
Last Updated 2 ಮೇ 2021, 4:10 IST
   

ಬೆಂಗಳೂರು: ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ಕಂಪನಿಯು ‘ಮ್ಯಾಕ್ಸ್ ಲೈಫ್ ಸ್ಮಾರ್ಟ್ ಸೆಕ್ಯೂರ್ ಪ್ಲಸ್ ಪ್ಲಾನ್’ ಎಂಬ ಹೊಸ ವಿಮೆಯನ್ನು ಪರಿಚಯಿಸಿದೆ. ಹೊಸ ಪೀಳಿಗೆಯ ಗ್ರಾಹಕರಿಗೆ ತಮ್ಮ ವೈಯಕ್ತಿಕ ಅಗತ್ಯಗಳನ್ನು ಪೂರೈಸಿಕೊಳ್ಳಲು ಹಣಕಾಸಿನ ಪ್ರಯೋಜನಗಳನ್ನು ಇದು ಹೆಚ್ಚಿಸಲಿದೆ ಎಂದು ಹೇಳಿದೆ.

ಈ ಯೋಜನೆಯು ಪಾಲಿಸಿದಾರರಿಗೆ ಪ್ರೀಮಿಯಂ ಬ್ರೇಕ್ ಆಪ್ಶನ್’, `ಸ್ಪೆಷಲ್ ಎಕ್ಸಿಟ್ ವ್ಯಾಲ್ಯೂ’, ನಾಮಿನಿಗೆ ಚಾಯ್ಸ್ ಆಫ್ ಕ್ಲೇಮ್ಸ್ ಪೇಔಟ್ ಸೌಲಭ್ಯಗಳನ್ನು ನೀಡಲಿದೆ. ‘ಸ್ಪೆಷಲ್ ಎಕ್ಸಿಟ್ ವ್ಯಾಲ್ಯೂ’ನ ಅಡಿಯಲ್ಲಿ ಗ್ರಾಹಕರಿಗೆ ನಿರ್ದಿಷ್ಟ ಸಮಯದಲ್ಲಿ ತಾವು ಪಾವತಿಸಿದ ಎಲ್ಲಾ ಪ್ರೀಮಿಯಂಗಳನ್ನು ಬೇಸ್ ಪ್ರೊಟೆಕ್ಷನ್ ಪ್ರಯೋಜನದೊಂದಿಗೆ ವಾಪಸ್ ಪಡೆಯಲು ಅವಕಾಶವನ್ನು ಕಲ್ಪಿಸಲಾಗಿದೆ. ಇದಲ್ಲದೇ, ಗ್ರಾಹಕರು ‘ಪ್ರೀಮಿಯಂ ಬ್ರೇಕ್’ ಆಯ್ಕೆಯೊಂದಿಗೆ ತಮಗೆ ಬೇಕು ಎನಿಸಿದಾಗ ಪ್ರೀಮಿಯಂ ಪಾವತಿ ಅವಧಿಯಲ್ಲಿ ಎರಡು ಬಾರಿ ಪ್ರೀಮಿಯಂ ಪಾವತಿಯಿಂದ ದೂರ ಉಳಿಯಬಹುದು ಮತ್ತು ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ. ಈ ವಿಮೆಯು 18 ರಿಂದ 65 ವರ್ಷ ವಯೋಮಾನದವರಿಗೆ ಲಭ್ಯವಿದೆ. ಅಕಾಲಿಕವಾಗಿ ಅನಾರೋಗ್ಯಕ್ಕೆ ತುತ್ತಾದರೆ 1 ಕೋಟಿ ರೂಪಾಯಿವರೆಗೆ ಲೈಫ್ ಕವರ್ ಪಡೆದುಕೊಳ್ಳಬಹುದಾಗಿದೆ.

ನಮ್ಮ ಗ್ರಾಹಕರಿಗೆ ವ್ಯಕ್ತಿಗತ ಆದ್ಯತೆ ಮತ್ತು ಕಸ್ಟಮೈಸ್ಡ್ ಪ್ರಯೋಜನಗಳನ್ನು ನೀಡಲಿದ್ದೇವೆ. ಈ ಯೋಜನೆಯ ಗ್ರಾಹಕರಿಗೆ ತಮ್ಮ ಹಣಕಾಸು ಅಗತ್ಯತೆಗಳನ್ನು ಪೂರೈಸಿಕೊಳ್ಳಲು ನೆರವಾಗುತ್ತದೆ. ನಮ್ಮ ಗ್ರಾಹಕರ ತ್ವರಿತವಾದ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಈ ಪಾಲಿಸಿಯನ್ನು ರೂಪಿಸಿದ್ದೇವೆ ಎಂದು ಮ್ಯಾಕ್ಸ್ ಲೈಫ್‌ನ ನಿರ್ದೇಶಕ ಅಲೋಕ್ ಭಾನ್ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.