
ನವದೆಹಲಿ: ದೇಶದ ದೂರಸಂಪರ್ಕ ಸೇವಾ ವಲಯದ ಕಂಪನಿಗಳು ಸೇವಾ ಶುಲ್ಕವನ್ನು ಜೂನ್‌ನಲ್ಲಿ ಶೇಕಡ 15ರಷ್ಟು ಹೆಚ್ಚಿಸುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಅಂದಾಜು ಮಾಡಿದ್ದಾರೆ. ಬ್ರೋಕರೇಜ್ ಸಂಸ್ಥೆ ಜೆಫರೀಸ್‌ನ ತಜ್ಞರು ಸಿದ್ಧಪಡಿಸಿರುವ ವರದಿಯಲ್ಲಿ ಈ ಅಂದಾಜು ನೀಡಲಾಗಿದೆ.
ಶುಲ್ಕ ಹೆಚ್ಚಳ ಮಾತ್ರವೇ ಅಲ್ಲದೆ, ಇಂಟರ್ನೆಟ್ ಬಳಕೆ ಹೆಚ್ಚಾಗುತ್ತಿರುವುದು, ಪೋಸ್ಟ್‌ಪೇಯ್ಡ್ ಗ್ರಾಹಕರು ಜಾಸ್ತಿ ಆಗುತ್ತಿರುವುದು ಪ್ರತಿ ಗ್ರಾಹಕನಿಂದ ಬರುವ ವರಮಾನವನ್ನು (ಎಆರ್‌ಪಿಯು) ಹೆಚ್ಚುಮಾಡುತ್ತಿವೆ ಎಂದು ವರದಿಯಲ್ಲಿ ಹೇಳಲಾಗಿದೆ.
ಜಿಯೊ ಕಂಪನಿಯು ತನ್ನ ಶುಲ್ಕಗಳನ್ನು ಶೇ 10ರಿಂದ ಶೇ 20ರವರೆಗೆ ಹೆಚ್ಚು ಮಾಡಬಹುದು ಎಂದು ಅಂದಾಜು ಮಾಡಲಾಗಿದೆ. ಸಾಲದ ಸುಳಿಗೆ ಸಿಲುಕಿರುವ ವೊಡಾಫೋನ್ ಐಡಿಯಾ ಕಂಪನಿಯು ತಾನು ಬಾಕಿ ಇರಿಸಿಕೊಂಡಿರುವ ಮೊತ್ತಗಳನ್ನು ಪಾವತಿಸಲು 2026–27ರಿಂದ 2029–30ರ ನಡುವೆ ಶುಲ್ಕವನ್ನು ಶೇ 45ರಷ್ಟು ಹೆಚ್ಚಿಸಬೇಕಾಗುತ್ತದೆ ಎಂದು ವರದಿಯು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.