ADVERTISEMENT

ದೇಶದ ಜಿಡಿಪಿ ಅಂದಾಜು ಶೇ 2.5ಕ್ಕೆ ತಗ್ಗಿಸಿದ ಮೂಡೀಸ್‌ 

ಏಜೆನ್ಸೀಸ್
Published 27 ಮಾರ್ಚ್ 2020, 6:22 IST
Last Updated 27 ಮಾರ್ಚ್ 2020, 6:22 IST
ಜಿಡಿಪಿ ಅಂದಾಜು
ಜಿಡಿಪಿ ಅಂದಾಜು    

ನವದೆಹಲಿ: ಮೂಡೀಸ್‌ ಇನ್ವೆಸ್ಟರ್ಸ್‌ ಸರ್ವೀಸ್‌ 2019–20ನೇ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ವೃದ್ಧಿ ಅಂದಾಜನ್ನು ಶೇ 2.5ಕ್ಕೆ ತಗ್ಗಿಸಿದೆ. ಫೆಬ್ರುವರಿಯಲ್ಲಿ ಜಿಡಿಪಿ ಅಂದಾಜು ಶೇ 6.6ರಿಂದ ಶೇ 5.3ಕ್ಕೆ ಇಳಿಸಲಾಗಿತ್ತು.

ಕೊರೊನಾ ವೈರಸ್‌ ಸೋಂಕು ಸಾಂಕ್ರಾಮಿಕವಾಗಿರುವುದರಿಂದ ದೇಶದ ಆರ್ಥಿಕತೆ ಮೇಲೆ ತೀವ್ರ ಪರಿಣಾಮ ಉಂಟಾಗಲಿದೆ. 2019ಕ್ಕಿಂತಲೂ ವೃದ್ಧಿ ದರ ಕುಂಠಿತವಾಗಲಿದೆ ಎಂದು ಹೇಳಿದೆ.

ದೇಶದಲ್ಲಿ ಆದಾಯದಲ್ಲಿಯೂ ತೀವ್ರ ಕುಸಿತ ಕಾಣಲಿದೆ. ಸ್ಥಳೀಯ ಬೇಡಿಕೆಗಳ ಲೆಕ್ಕಾಚಾರದಲ್ಲಿ 2021ರಲ್ಲಿ ಆರ್ಥಿಕ ಚೇತರಿಕೆ ಉಂಟಾಗಲಿದೆ. ಜಾಗತಿಕವಾಗಿ ಜಿಡಿಪಿ ವೃದ್ಧಿಯು 2020ರಲ್ಲಿ ಶೇ –0.5ಕ್ಕೆ ಇಳಿಯಲಿದೆ ಹಾಗೂ ದೇಶದ ಜಿಡಿಪಿ 2021ರಲ್ಲಿ ಶೇ 5.8ಕ್ಕೆ ಜಿಗಿಯಲಿದೆ ಎಂದು ಅಂದಾಜಿಸಿದೆ.

ADVERTISEMENT

ಭಾರತೀಯ ರಿಸರ್ವ್‌ ಬ್ಯಾಂಕ್‌ ಶುಕ್ರವಾರ ರೆಪೊ ದರ ಶೇ 0.75ರಷ್ಟು ಕಡಿತಗೊಳಿಸಿ ಶೇ 4.4 ನಿಗದಿ ಪಡಿಸುವ ಜೊತೆಗೆ ನಗದು ಮೀಸಲು ಅನುಪಾತವನ್ನು (ಸಿಆರ್‌ಆರ್) ಶೇ 3ಕ್ಕೆ ನಿಗದಿ ಮಾಡಿದೆ. ಇದರಿಂದಾಗಿ ಬ್ಯಾಂಕಿಂಗ್‌ ವಲಯದಲ್ಲಿ ₹1.37 ಲಕ್ಷ ಕೋಟಿ ಹಣದ ಹರಿವು ಇರಲಿದೆ ಎಂದು ಆರ್‌ಬಿಐ ಹೇಳಿದೆ. ಇಎಂಐ ಪಾವತಿಯನ್ನೂ 3 ತಿಂಗಳ ವರೆಗೂ ಮುಂದೂಡುವ ಅವಕಾಶ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.