ADVERTISEMENT

ಬೆಳವಣಿಗೆ ಅಂದಾಜು ತಗ್ಗಿಸಿದ ಮೂಡಿಸ್

ಪಿಟಿಐ
Published 26 ಮೇ 2022, 11:24 IST
Last Updated 26 ಮೇ 2022, 11:24 IST

ನವದೆಹಲಿ (ಪಿಟಿಐ): ಮೂಡಿಸ್ ಇನ್ವೆಸ್ಟರ್ಸ್ ಸರ್ವಿಸ್ ಸಂಸ್ಥೆಯು ಭಾರತದ ಆರ್ಥಿಕ ಬೆಳವಣಿಗೆ ದರವು 2022ರಲ್ಲಿ ಶೇಕಡ 8.8ರಷ್ಟು ಇರಲಿದೆ ಎಂದು ಹೇಳಿದೆ. ಬೆಳವಣಿಗೆ ದರವು ಶೇ 9.1ರಷ್ಟು ಆಗಲಿದೆ ಎಂದು ಸಂಸ್ಥೆಯು ಈ ಮೊದಲು ಅಂದಾಜಿಸಿತ್ತು.

ಬೆಳವಣಿಗೆ ಅಂದಾಜನ್ನು ತಗ್ಗಿಸಿರುವುದಕ್ಕೆ ಪ್ರಮುಖ ಕಾರಣ ಹಣದುಬ್ಬರದ ಹೆಚ್ಚಳ ಎಂದು ಸಂಸ್ಥೆ ಹೇಳಿದೆ.

ಕಚ್ಚಾ ತೈಲ, ಆಹಾರ ಉತ್ಪನ್ನಗಳು, ರಸಗೊಬ್ಬರದ ಬೆಲೆ ಏರಿಕೆಯು ಕುಟುಂಬಗಳ ಖರ್ಚುಗಳ ಮೇಲೆ ಮುಂದಿನ ತಿಂಗಳುಗಳಲ್ಲಿ ಪರಿಣಾಮ ಉಂಟುಮಾಡಲಿದೆ. ಇಂಧನ ಹಾಗೂ ಆಹಾರ ವಸ್ತುಗಳ ಬೆಲೆ ಹೆಚ್ಚಳವು ಇನ್ನಷ್ಟು ವ್ಯಾ‍ಪಕವಾಗುವುದನ್ನು ತಡೆಯುವ ಉದ್ದೇಶದಿಂದ ರೆಪೊ ದರ ಹೆಚ್ಚಳ ಮಾಡಿರುವುದು ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಳವಾಗುವುದಕ್ಕೆ ಅಡ್ಡಿಯಾಗಲಿದೆ ಎಂದು ಸಂಸ್ಥೆ ಅಂದಾಜಿಸಿದೆ.

ADVERTISEMENT

2023ರಲ್ಲಿ ಬೆಳವಣಿಗೆ ದರವು ಶೇ 5.4ರಷ್ಟು ಇರಲಿದೆ ಎಂದು ಈ ಮೊದಲು ಮಾಡಿದ್ದ ಅಂದಾಜಿನಲ್ಲಿ ಸಂಸ್ಥೆಯು ಬದಲಾವಣೆ ತಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.