ADVERTISEMENT

ಷೇರುಗಳಿಂದ ₹12,980 ಕೋಟಿ ಹಿಂಪಡೆದ ಮ್ಯೂಚುವಲ್‌ ಫಂಡ್‌ಗಳು

ಪಿಟಿಐ
Published 7 ಫೆಬ್ರುವರಿ 2021, 12:42 IST
Last Updated 7 ಫೆಬ್ರುವರಿ 2021, 12:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಮ್ಯೂಚುವಲ್ ಫಂಡ್ ಕಂಪನಿಗಳು ಸತತ ಎಂಟನೇ ತಿಂಗಳಿನಲ್ಲಿಯೂ ಷೇರುಗಳ ಮಾರಾಟಕ್ಕೆ ಗಮನ ನೀಡಿವೆ. ಜನವರಿಯಲ್ಲಿ ₹ 12,980 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿವೆ. ಷೇರುಪೇಟೆಯು ಏರುಮುಖವಾಗಿದ್ದರಿಂದ ಲಾಭ ಗಳಿಸಿಕೊಳ್ಳುವ ಉದ್ದೇಶದಿಂದ ಈ ಕ್ರಮ ಕೈಗೊಂಡಿವೆ.

ಷೇರುಪೇಟೆಯು ಏರಿಕೆಯ ಹಾದಿಯಲ್ಲಿಯೇ ಇರುವುದರಿಂದ ಇನ್ನೂ ಕೆಲವು ಸಮಯದವರೆಗೆ ಲಾಭ ಗಳಿಸಿಕೊಳ್ಳುವುದರತ್ತಹೂಡಿಕೆದಾರರು ಗಮನ ಹರಿಸುವ ಸಾಧ್ಯತೆ ಇದೆ ಎಂದು ಮೈವೆಲ್ತ್‌ಗ್ರೋತ್‌ ಡಾಟ್‌ಕಾಂನ ಸಹ ಸ್ಥಾಪಕ ಹರ್ಷದ್‌ ಚೇತನ್ವಾಲಾ ಹೇಳಿದ್ದಾರೆ.

ಅಭಿವೃದ್ಧಿಗೆ ಗಮನ ಹರಿಸಿರುವ ಬಜೆಟ್, ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಹಾಗೂ ಕೋವಿಡ್‌ಗೆ ಲಸಿಕೆ ಲಭ್ಯವಾಗುತ್ತಿರುವ ಕಾರಣಗಳಿಂದಾಗಿ ಸದ್ಯದ ಮಟ್ಟಿಗೆ ಷೇರು‍ಗಳು ಹೂಡಿಕೆಗೆ ಅತ್ಯುತ್ತಮವಾದ ಸ್ವತ್ತಿನ ಮೂಲವಾಗಿ ಇರಲಿವೆ ಎಂದೂ ಅವರು ತಿಳಿಸಿದ್ದಾರೆ.

ADVERTISEMENT

2020ರಲ್ಲಿ ಮ್ಯೂಚುವಲ್ ಫಂಡ್‌ಗಳು ಒಟ್ಟಾರೆ ₹ 56,400 ಕೋಟಿಯನ್ನು ಹಿಂದಿಕ್ಕೆ ಪ‍ಡೆದಿವೆ ಎನ್ನುವ ಮಾಹಿತಿಯು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯಲ್ಲಿದೆ (ಸೆಬಿ). ಮ್ಯೂಚುವಲ್‌ ಫಂಡ್‌ಗಳು ಸಾಲಪತ್ರಗಳ ಮಾರುಕಟ್ಟೆಯಲ್ಲಿ ಜನವರಿಯಲ್ಲಿ ₹ 11,832 ಕೋಟಿ ಹೂಡಿಕೆ ಮಾಡಿವೆ.

ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಜನವರಿಯಲ್ಲಿ ಷೇರು ಮಾರುಕಟ್ಟೆಯಲ್ಲಿ ₹ 19,472 ಕೋಟಿ ಹೂಡಿಕೆ ಮಾಡಿದ್ದಾರೆ. 2020ರಲ್ಲಿ ಒಟ್ಟಾರೆ ₹ 1.7 ಲಕ್ಷ ಕೋಟಿ ಹೂಡಿಕೆ ಮಾಡಿದ್ದರು.

ಬಂಡವಾಳ ಹೊರಹರಿವು (ಕೋಟಿಗಳಲ್ಲಿ)

ಡಿಸೆಂಬರ್‌;₹ 26,428

ನವೆಂಬರ್‌;₹ 30,760

ಅಕ್ಟೋಬರ್;₹ 14,492

ಸೆಪ್ಟೆಂಬರ್‌;₹ 4,134

ಆಗಸ್ಟ್‌;₹ 9,213

ಜುಲೈ;₹ 9,195

ಜೂನ್‌;₹ 612

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.