ADVERTISEMENT

ಮಾರುತಿ ಸುಜುಕಿ 'ಇ–ವಿಟಾರಾ'ಗೆ ಮೋದಿ ಚಾಲನೆ: ₹70 ಸಾವಿರ ಕೋಟಿ ಹೂಡಿಕೆ

ಪಿಟಿಐ
Published 26 ಆಗಸ್ಟ್ 2025, 13:49 IST
Last Updated 26 ಆಗಸ್ಟ್ 2025, 13:49 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ಹಂಸಲಪುರದ ತಯಾರಿಕಾ ಘಟಕದಲ್ಲಿ ತಯಾರಾಗಿರುವ ಮಾರುತಿ ಸುಜುಕಿಯ ಮೊದಲ ವಿದ್ಯುತ್‌ಚಾಲಿತ ವಾಹನ ಇ–ವಿಟಾರಾ ರಫ್ತಿಗೆ ಚಾಲನೆ ನೀಡಿದರು. ಈ ವೇಳೆ&nbsp;ಕಂಪನಿಯ&nbsp;ಪ್ರತಿನಿಧಿ ನಿರ್ದೇಶಕ ಮತ್ತು ಅಧ್ಯಕ್ಷ&nbsp;ತೋಶಿಹಿರೊ ಸುಜುಕಿ ಇದ್ದಾರೆ.</p></div>

ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ಹಂಸಲಪುರದ ತಯಾರಿಕಾ ಘಟಕದಲ್ಲಿ ತಯಾರಾಗಿರುವ ಮಾರುತಿ ಸುಜುಕಿಯ ಮೊದಲ ವಿದ್ಯುತ್‌ಚಾಲಿತ ವಾಹನ ಇ–ವಿಟಾರಾ ರಫ್ತಿಗೆ ಚಾಲನೆ ನೀಡಿದರು. ಈ ವೇಳೆ ಕಂಪನಿಯ ಪ್ರತಿನಿಧಿ ನಿರ್ದೇಶಕ ಮತ್ತು ಅಧ್ಯಕ್ಷ ತೋಶಿಹಿರೊ ಸುಜುಕಿ ಇದ್ದಾರೆ.

   

ಪಿಟಿಐ ಚಿತ್ರ

ಗುಜರಾತ್‌: ದೇಶದಲ್ಲಿ ಕಂಪನಿಯ ಕಾರ್ಯಾಚರಣೆ ಸದೃಢಗೊಳಿಸಲು ಮುಂದಿನ ಐದರಿಂದ ಆರು ವರ್ಷದಲ್ಲಿ ₹70 ಸಾವಿರ ಕೋಟಿ ಹೂಡಿಕೆ ಮಾಡುವುದಾಗಿ ವಾಹನ ತಯಾರಕ ಕಂಪನಿ ಸುಜುಕಿ ಮೋಟರ್‌ ಕಾರ್ಪೊರೇಷನ್‌ ತಿಳಿಸಿದೆ.

ADVERTISEMENT

ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ಹಂಸಲಪುರದ ತಯಾರಿಕಾ ಘಟಕದಲ್ಲಿ ತಯಾರಾಗಿರುವ ಮಾರುತಿ ಸುಜುಕಿಯ ಮೊದಲ ವಿದ್ಯುತ್‌ಚಾಲಿತ ವಾಹನ ಇ–ವಿಟಾರಾ ರಫ್ತಿಗೆ ಚಾಲನೆ ನೀಡಿದರು. ಇದೇ ವೇಳೆ ಲಿಥಿಯಂ–ಐಯಾನ್‌ ಬ್ಯಾಟರಿ ತಯಾರಿಕಾ ಘಟಕವನ್ನು ಉದ್ಘಾಟಿಸಿದರು.

ಮಾರುತಿ ಸುಜುಕಿ ಇಂಡಿಯಾದ ಇ–ವಿಟಾರಾ ಜಪಾನ್‌ ಸೇರಿದಂತೆ 100 ರಾಷ್ಟ್ರಗಳಿಗೆ ರಫ್ತಾಗಲಿದೆ. ಈಗಾಗಲೇ ಕಂಪನಿಯು ಭಾರತದಲ್ಲಿ ₹1 ಲಕ್ಷ ಕೋಟಿ ಹೂಡಿಕೆ ಮಾಡಿದೆ. ಈ ಹೂಡಿಕೆಯು 11 ಲಕ್ಷಕ್ಕೂ ಹೆಚ್ಚು ನೇರ ಉದ್ಯೋಗಗಳ ಸೃಷ್ಟಿಗೆ ಕಾರಣವಾಗಿದೆ ಎಂದು ಕಂಪನಿಯ ಪ್ರತಿನಿಧಿ ನಿರ್ದೇಶಕ ಮತ್ತು ಅಧ್ಯಕ್ಷ ತೋಶಿಹಿರೊ ಸುಜುಕಿ ಹೇಳಿದ್ದಾರೆ.

ಗುಜರಾತ್‌ನ ಪಿಪಾವಾವ್‌ ಬಂದರಿನಿಂದ ಬ್ರಿಟನ್‌, ಜರ್ಮನಿ, ನಾರ್ವೆ, ಫ್ರಾನ್ಸ್‌, ಡೆನ್ಮಾರ್ಕ್‌, ಸ್ವಿಟ್ಜರ್ಲೆಂಡ್‌, ನೆದರ್ಲೆಂಡ್ಸ್, ಸ್ವೀಡನ್, ಹಂಗೇರಿ, ಐಸ್‌ಲ್ಯಾಂಡ್‌, ಇಟಲಿ, ಆಸ್ಟ್ರೀಯ ಮತ್ತು ಬೆಲ್ಜಿಯಂಗೆ ಇ–ವಿಟಾರಾದ ವಾಹನಗಳ ಮೊದಲ ಬ್ಯಾಚ್ ಅನ್ನು ರಫ್ತು ಮಾಡಲಾಗುವುದು ಎಂದು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.