ADVERTISEMENT

‘ಐಎಂಎಫ್‌’ಗೆ ಕ್ರಿಸ್ಟಲಿನಾಹೊಸ ಮುಖ್ಯಸ್ಥೆ

ಪಿಟಿಐ
Published 26 ಸೆಪ್ಟೆಂಬರ್ 2019, 13:12 IST
Last Updated 26 ಸೆಪ್ಟೆಂಬರ್ 2019, 13:12 IST
ಕ್ರಿಸ್ಟಿಲಿನಾ ಜಿ.
ಕ್ರಿಸ್ಟಿಲಿನಾ ಜಿ.   

ವಾಷಿಂಗ್ಟನ್‌: ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್‌) ಹೊಸ ಮುಖ್ಯಸ್ಥೆಯಾಗಿ ಬಲ್ಗೆರಿಯಾದ ಆರ್ಥಿಕತಜ್ಞೆ ಕ್ರಿಸ್ಟಿಲಿನಾ ಜಿ. (66) ಅವರು ನೇಮಕಗೊಂಡಿದ್ದಾರೆ.

ಪ್ರವರ್ಧಮಾನಕ್ಕೆ ಬರುತ್ತಿರುವ ದೇಶವೊಂದರ ಅರ್ಥಶಾಸ್ತ್ರಜ್ಞರೊಬ್ಬರು ಐಎಂಎಫ್‌ ಮುನ್ನಡೆಸುವ ದೊಡ್ಡ ಹೊಣೆ ಹೊತ್ತುಕೊಂಡಿರುವುದು ಇದೇ ಮೊದಲ ಬಾರಿಯಾಗಿದೆ.

ಜಾಗತಿಕ ಆರ್ಥಿಕ ಬೆಳವಣಿಗೆಯು ನಿರಾಶಾದಾಯಕವಾಗಿರುವ, ಸಾಲದ ಹೊರೆ ಹೆಚ್ಚಿರುವ ಮತ್ತು ಎಲ್ಲೆಡೆ ವಾಣಿಜ್ಯ ಉದ್ವಿಗ್ನ ಪರಿಸ್ಥಿತಿ ಇರುವ ಸಂದರ್ಭದಲ್ಲಿ ಕ್ರಿಸ್ಟಿಲಿನಾ ಅವರು ಈ ಹುದ್ದೆ ನಿಭಾಯಿಸಲಿದ್ದಾರೆ.

ADVERTISEMENT

ಕ್ರಿಸ್ಟಿನ್‌ ಲಗಾರ್ಡ್‌ ಅವರಿಂದ ತೆರವಾಗುತ್ತಿರುವ ಹುದ್ದೆಗೆ ನೇಮಕಗೊಂಡಿರುವ ಕ್ರಿಸ್ಟಿಲಿನಾ ಅವರ 5 ವರ್ಷಗಳ ಅಧಿಕಾರಾವಧಿ ಅಕ್ಟೋಬರ್‌ 1 ರಿಂದ ಆರಂಭಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.