ನವದೆಹಲಿ: ಬೆಂಗಳೂರು ಸೇರಿ ದೇಶದ ಎಂಟು ಪ್ರಮುಖ ನಗರಗಳ ವ್ಯಾಪ್ತಿ 2024ರಲ್ಲಿ ಹೊಸ ಕಚೇರಿಗೆ ಸ್ಥಳಾವಕಾಶ ಒದಗಿಸುವ ಪ್ರಮಾಣದಲ್ಲಿ ಶೇ 6ರಷ್ಟು ಇಳಿಕೆಯಾಗಿದೆ ಎಂದು ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆ ಕುಶ್‌ಮನ್ ಮತ್ತು ವೇಕ್‌ಫೀಲ್ಡ್ (ಸಿ ಆ್ಯಂಡ್ ಡಬ್ಲ್ಯು) ವರದಿ ಭಾನುವಾರ ತಿಳಿಸಿದೆ.
2023ರಲ್ಲಿ 477.9 ಲಕ್ಷ ಚದರ ಅಡಿಯಷ್ಟು ಹೊಸ ಕಚೇರಿಗೆ ಸ್ಥಳಾವಕಾಶ ಒದಗಿಸಲಾಗಿತ್ತು. 2024ರಲ್ಲಿ 451.5 ಲಕ್ಷ ಚದರ ಅಡಿಗೆ ಇಳಿದಿದೆ ಎಂದು ತಿಳಿಸಿದೆ.
ದೆಹಲಿ, ಪುಣೆ, ಚೆನ್ನೈ, ಹೈದರಾಬಾದ್, ಕೋಲ್ಕತ್ತ ಮತ್ತು ಅಹಮದಾಬಾದ್‌ನಲ್ಲಿ ಹೊಸದಾಗಿ ಸ್ಥಳಾವಕಾಶ ಒದಗಿಸುವುದು ಕಡಿಮೆಯಾಗಿದ್ದರೆ, ಮುಂಬೈ ಮತ್ತು ಬೆಂಗಳೂರಿನಲ್ಲಿ ಏರಿಕೆಯಾಗಿದೆ.
2023ರಲ್ಲಿ ಮುಂಬೈನಲ್ಲಿ 20.5 ಲಕ್ಷ ಚದರ ಅಡಿ ಹೊಸ ಕಚೇರಿಗೆ ಸ್ಥಳ ಒದಗಿಸಲಾಗಿತ್ತು. 2024ರಲ್ಲಿ ಅದು 4 ಪಟ್ಟು ಹೆಚ್ಚಳವಾಗಿದ್ದು, 83.2 ಲಕ್ಷ ಚದರ ಅಡಿ ಆಗಿದೆ. ಬೆಂಗಳೂರಿನಲ್ಲಿ 133.1 ಲಕ್ಷ ಚದರ ಅಡಿಯಿಂದ 133.4 ಲಕ್ಷ ಚದರ ಅಡಿಗೆ ಹೆಚ್ಚಳವಾಗಿದೆ.
ಆದರೆ, ಇದೇ ವೇಳೆ ಚೆನ್ನೈನಲ್ಲಿಶೇ 59ರಷ್ಟು ಇಳಿಕೆಯಾಗಿದ್ದು, 21.7 ಲಕ್ಷ ಚದರ ಅಡಿಗೆ ಇಳಿದಿದೆ. ಪುಣೆ (ಶೇ 27), ಹೈದರಾಬಾದ್ (ಶೇ 21), ದೆಹಲಿ (ಶೇ 5), ಅಹಮದಾಬಾದ್‌ನಲ್ಲಿ ಶೇ 2ರಷ್ಟು ಕಡಿಮೆಯಾಗಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.