ADVERTISEMENT

ಇಂದಿನಿಂದ ಎಲ್‍ಐಸಿ ಹೌಸಿಂಗ್‌ ಫೈನಾನ್ಸ್‌ ‘ನಿಮ್ಮ ಮನೆ’ ಮೇಳ

​ಪ್ರಜಾವಾಣಿ ವಾರ್ತೆ
Published 21 ಜೂನ್ 2018, 17:15 IST
Last Updated 21 ಜೂನ್ 2018, 17:15 IST
   

ಬೆಂಗಳೂರು: ಗೃಹ ಹಣಕಾಸು ಸಂಸ್ಥೆ ಎಲ್‍ಐಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (ಎಲ್‍ಐಸಿ ಎಚ್‍ಎಫ್‍ಎಲ್), ಶುಕ್ರವಾರದಿಂದ ಮೂರು ದಿನಗಳ ಕಾಲ ( ಜೂನ್‌ 22ರಿಂದ 24) ‘ನಿಮ್ಮ ಮನೆ’ ಹೆಸರಿನ ಸ್ಥಿರಾಸ್ತಿ ಮೇಳವನ್ನು ನಗರದ ಆರ್‍ಬಿಎನ್‍ಎಂಎಸ್ ಮೈದಾನದಲ್ಲಿ ಆಯೋಜಿಸುತ್ತಿದೆ.

ಈ ಮೇಳದಲ್ಲಿ ರಿಯಲ್ ಎಸ್ಟೇಟ್‌ ವಲಯದ 42ಕ್ಕೂ ಹೆಚ್ಚು ಪ್ರತಿಷ್ಠಿತ ಗೃಹ ನಿರ್ಮಾಣ ಸಂಸ್ಥೆಗಳು ಪಾಲ್ಗೊಳ್ಳುತ್ತಿವೆ. 100ಕ್ಕೂ ಹೆಚ್ಚು ಯೋಜನೆಗಳು ಇಲ್ಲಿ ಪ್ರದರ್ಶನಗೊಳ್ಳಲಿವೆ. ಎಲ್‍ಐಸಿ ಎಚ್‍ಎಫ್‍ಎಲ್‍ನ ಆಡಳಿತ ನಿರ್ದೇಶಕ ವಿನಯ್ ಶಾ ಶುಕ್ರವಾರ ಸಂಜೆ 5 ಗಂಟೆಗೆ ಮೇಳ ಉದ್ಘಾಟಿಸುವರು. ಈ ಪ್ರದರ್ಶನದಲ್ಲಿ ವಿಸ್ತೃತ ಶ್ರೇಣಿಯ ನಿವೇಶನಗಳು, ಫ್ಲ್ಯಾಟ್‍ಗಳು, ವಿಲ್ಲಾ ಯೋಜನೆಗಳು ಕೈಗೆಟುವ ದರದ ಮತ್ತು ಐಷಾರಾಮಿ ಶ್ರೇಣಿಯಲ್ಲಿ ಪ್ರದರ್ಶನಕ್ಕೆ ಇರಲಿವೆ.

ಮೇಳದಲ್ಲಿ ಭಾಗವಹಿಸುವ ಬಿಲ್ಡರ್‌ಗಳಿಂದ ರಿಯಾಯ್ತಿ ದರದಲ್ಲಿ ಗೃಹ ಖರೀದಿ ವಹಿವಾಟು ಕುದುರಿಸಿಕೊಳ್ಳಲು ಇದು ಉತ್ತಮ ವೇದಿಕೆಯಾಗಿರಲಿದೆ. ಎಲ್‍ಐಸಿ ಹೌಸಿಂಗ್ ಫೈನಾನ್ಸ್‌ನಿಂದ ಸ್ಥಳದಲ್ಲೇ ಸಾಲ ಮಂಜೂರಾತಿ ನೀಡುವ ಸೌಲಭ್ಯ ಇರಲಿದೆ. ಸಾಲ ಮಂಜೂರಾತಿ ಶುಲ್ಕ ಇರುವುದಿಲ್ಲ. ಗ್ರಾಹಕರು ತಮ್ಮ ಬಜೆಟ್‍ಗೆ ಅನುಗುಣವಾಗಿ ಮನೆಗಳನ್ನು ಖರೀದಿಸಲು ಇದು ನೆರವಾಗಲಿದೆ.

ADVERTISEMENT

ಎಲ್‍ಐಸಿ ಎಚ್‍ಎಫ್‍ಎಲ್, ಗೃಹ ಸಿದ್ಧಿ ಯೋಜನೆಯಡಿ ಗರಿಷ್ಠ 30 ವರ್ಷಗಳ ಅವಧಿಯ ಸಾಲ ಸೌಲಭ್ಯ ಒದಗಿಸುತ್ತಿದ್ದು, ಬಡ್ಡಿದರ ಕನಿಷ್ಠ ಶೇಕಡ 8.4ರಿಂದ ಆರಂಭವಾಗುತ್ತದೆ. ಗೃಹ ಸಾಲಗಾರರು ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಸಾಲ ಸಂಬಂಧಿತ ಸಬ್ಸಿಡಿ ಸೌಲಭ್ಯವನ್ನೂ ಪಡೆಯಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.