ನವದೆಹಲಿ: ಆಫೀಸರ್ಸ್ ಚಾಯ್ಸ್ ವಿಸ್ಕಿ ತಯಾರಕ ಕಂಪನಿ ಅಲೈಡ್ ಬ್ಲೆಂಡರ್ಸ್ ಆ್ಯಂಡ್ ಡಿಸ್ಟಿಲರ್ಸ್ ಲಿಮಿಟೆಡ್, ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ₹ 2 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಲು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ) ಪ್ರಾಥಮಿಕ ದಾಖಲೆ ಸಲ್ಲಿಸಿದೆ.
ಬಂಡವಾಳವನ್ನು ಕಂಪನಿಯು ಸಾಲ ತೀರಿಸಲು, ಇತರ ಕಾರ್ಪೊರೇಟ್ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳಲಿದೆ. ಕಂಪನಿಯು ವಿಸ್ಕಿ, ಬ್ರ್ಯಾಂಡಿ, ರಮ್ ಮತ್ತು ವೊಡ್ಕಾ ವಿಭಾಗಗಳಲ್ಲಿ ಒಟ್ಟು 10 ಬ್ರ್ಯಾಂಡ್‌ಗಳನ್ನು ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.