ADVERTISEMENT

ಮಾರ್ಚ್‌, ಏಪ್ರಿಲ್‌ನಲ್ಲಿ ತೈಲ ಬೇಡಿಕೆ ಭಾರೀ ಕುಸಿತ: ಗೋಲ್ಡ್‌ಮ್ಯಾನ್‌ ಸ್ಯಾಕ್ಸ್‌

ರಾಯಿಟರ್ಸ್
Published 26 ಮಾರ್ಚ್ 2020, 11:21 IST
Last Updated 26 ಮಾರ್ಚ್ 2020, 11:21 IST
ಕಚ್ಚಾ ತೈಲ– ಸಾಂಕೇತಿ ಚಿತ್ರ
ಕಚ್ಚಾ ತೈಲ– ಸಾಂಕೇತಿ ಚಿತ್ರ    

ಮಾರ್ಚ್‌ನಲ್ಲಿ ನಿತ್ಯದ ತೈಲ ಬೇಡಿಕೆ ಬ್ಯಾರೆಲ್‌ಗೆ 10.5 ಮಿಲಿಯನ್‌ಗೆ ಕುಸಿಯಬಹುದು ಹಾಗೂಏಪ್ರಿಲ್‌ನಲ್ಲಿ ದಿನದ ತೈಲ ಬೇಡಿಕೆ 18.7 ಮಿಲಿಯನ್‌ಆಗಬಹುದು ಎಂದು ವಾಲ್‌ ಸ್ಟ್ರೀಟ್‌ನಬ್ಯಾಂಕ್‌ಗೋಲ್ಡ್‌ಮ್ಯಾನ್‌ ಸ್ಯಾಕ್ಸ್‌ ಅಂದಾಜಿಸಿದೆ.

ಕೊರೊನಾ ವೈರಸ್‌ ಸೋಂಕು ವ್ಯಾಪಿಸುತ್ತಿರುವುದರಿಂದ ಜಗತ್ತಿನಾದ್ಯಂತ ವಿಮಾನಯಾನ ಹಾಗೂ ಇತರೆ ಮೋಟಾರು ವಾಹನಗಳ ಕಾರ್ಯಾಚರಣೆಗಳಿಗೆ ಅಡ್ಡಿ ಉಂಟಾಗಿದ್ದು, ತೈಲ ಬೇಡಿಕೆ ಕುಸಿದಿದೆ. ಇದರಿಂದಾಗಿ ತೈಲ ಸಂಸ್ಕರಣ ಘಟಕಗಳು ಕಾರ್ಯಾಚರಣೆ ಕಡಿತಗೊಳಿಸಿವೆ. ಈ ಕುರಿತುಮಾರ್ಚ್‌ 25ರಂದು ಬ್ಯಾಂಕ್‌ ತಿಳಿಸಿದೆ.

ತೈಲ ಬೇಡಿಕೆ ಕುಸಿತವು ಪೆಟ್ರೋಲಿಯಂ ರಫ್ತು ಮಾಡುವ ರಾಷ್ಟ್ರಗಳಿಗೆ ಭಾರೀ ಹೊಡೆತ ನೀಡಲಿದೆ. ದೊಡ್ಡ ಪ್ರಮಾಣದಲ್ಲಿ ಬೇಡಿಕೆ ಕುಸಿದಿರುವ ಪರಿಣಾಮ, ಪ್ರತಿ ನಿತ್ಯ ಲಕ್ಷಾಂತರ ಬ್ಯಾರೆಲ್‌ ತೈಲ ಉತ್ಪಾದನೆ ನಡೆಸುವ ಬಹುತೇಕ ಘಟಕಗಳಲ್ಲಿ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಬೇಕಾಗಿದೆ. ಉತ್ಪಾದನೆಯ ಮೇಲೆ ಬಿದ್ದಿರುವ ಹೊಡೆತ ತಕ್ಷಣದಲ್ಲಿಯೇ ಚೇತರಿಸಿಕೊಳ್ಳುವ ಲಕ್ಷಣಗಳಿಲ್ಲ ಎಂದು ಗೋಲ್ಡ್‌ಮ್ಯಾನ್‌ ಸ್ಯಾಕ್ಸ್‌ ಹೇಳಿದೆ.

ADVERTISEMENT

ಮೂರು ದಿನಗಳಿಂದ ಏರಿಕೆ ಕಂಡಿದ್ದ ತೈಲ ಬೆಲೆ ಗುರುವಾರ ಇಳಿಮುಖವಾಗಿದೆ. ಕೋವಿಡ್‌–19 ತಡೆಗಟ್ಟು ನಿಟ್ಟಿನಲ್ಲಿ ಸರ್ಕಾರಗಳು ಪ್ರಯಾಣಗಳ ಮೇಲೆ ನಿರ್ಬಂಧ ಹೇರಿರುವುದು ಹಾಗೂ ಲಾಕ್‌ಡೌನ್‌ ಘೋಷಣೆ ತೈಲ ಬೇಡಿಕೆ ಕುಸಿಯಲು ಕಾರಣಗಳಾಗಿವೆ.

ಮುಂದಿನ ವಾರಗಳಲ್ಲಿ ತೈಲ ಬೆಲೆಯಲ್ಲಿ ಇನ್ನಷ್ಟು ಕುಸಿಯಿವ ಸಾಧ್ಯತೆ ಇದೆ. ಪ್ರಸ್ತುತ ಬ್ರೆಂಟ್‌ ಕಚ್ಚಾ ತೈಲ ದರ ಬ್ಯಾರೆಲ್‌ಗೆ 29.42 ಹಾಗೂ ಡಬ್ಯ್ಲುಟಿಐ ಕಚ್ಚಾ ತೈಲ ದರ ಬ್ಯಾರೆಲ್‌ಗೆ 23.89 ಇದೆ. ದೇಶದಾದ್ಯಂತ ಮಾರ್ಚ್‌ 17ರಿಂದ ಪೆಟ್ರೋಲ್‌ ಮತ್ತು ಡೀಸೆಲ್‌ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಬೆಂಗಳೂರಿನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ಗೆ ₹71.97 ಹಾಗೂ ಪ್ರತಿ ಲೀಟರ್‌ ಡೀಸೆಲ್‌ಗೆ ₹64.41 ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.