ADVERTISEMENT

ಭಾರತೀಯ ತೈಲ ನಿಗಮದ ಲಾಭ ಇಳಿಕೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2025, 15:12 IST
Last Updated 8 ಫೆಬ್ರುವರಿ 2025, 15:12 IST
ಐಒಸಿ
ಐಒಸಿ   

ನವದೆಹಲಿ: 2024–25ರ ಆರ್ಥಿಕ ವರ್ಷದ ಡಿಸೆಂಬರ್‌ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಭಾರತೀಯ ತೈಲ ನಿಗಮದ (ಐಒಸಿ) ನಿವ್ವಳ ಲಾಭದಲ್ಲಿ ಶೇ 23ರಷ್ಟು ಇಳಿಕೆಯಾಗಿದೆ.

2023–24ರ ಆರ್ಥಿಕ ವರ್ಷದ ಇದೇ ತ್ರೈಮಾಸಿಕದಲ್ಲಿ ₹1,584 ಕೋಟಿ ನಿವ್ವಳ ಲಾಭ ಗಳಿಸಿತ್ತು. ಅದು ಈ ಬಾರಿ ₹1,221 ಕೋಟಿ ಆಗಿದೆ. ತೆರಿಗೆ, ಬಡ್ಡಿ, ಸಾಲ ತೀರುವಳಿ (ಇಬಿಐಟಿಡಿಎ) ನಂತರದ ಆದಾಯವು ₹2,321 ಕೋಟಿಯಾಗಿದೆ ಎಂದು ಕಂಪನಿ ತಿಳಿಸಿದೆ.

ಪ್ರತಿ ಷೇರಿಗೆ ₹7 ಮಧ್ಯಂತರ ಲಾಭಾಂಶ ನೀಡಲು ಮಂಡಳಿ ಶಿಫಾರಸು ಮಾಡಿದೆ. ಇದರೊಂದಿಗೆ ಇದುವರೆಗೆ ಒಟ್ಟು ಮಧ್ಯಂತರ ಲಾಭಾಂಶ ಘೋಷಣೆ ಪ್ರತಿ ಷೇರಿಗೆ ₹10 ಆಗಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.