ADVERTISEMENT

ಕೋವಿಡ್‌–19 ಪರಿಣಾಮ: 17 ವರ್ಷಗಳ ಕನಿಷ್ಠ ಮಟ್ಟಕ್ಕಿಳಿದ ತೈಲ ದರ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2020, 7:31 IST
Last Updated 30 ಮಾರ್ಚ್ 2020, 7:31 IST
   

ನವದೆಹಲಿ: ಪ್ರಪಂಚದಾದ್ಯಂತ ಭೀತಿ ಉಂಟುಮಾಡಿರುವ ಕೋವಿಡ್‌–19 ಸೋಂಕು ಜಾಗತಿಕ ಮಾರುಕಟ್ಟೆಯಲ್ಲಿ ಸೃಷ್ಟಿಸಿರುವ ತಲ್ಲಣಕ್ಕೆ ಕೊನೆಯಿಲ್ಲದಂತಾಗಿದೆ.ಸೋಂಕಿನ ಪರಿಣಾಮದಿಂದಾಗಿ ಏಷ್ಯಾ ತೈಲ ಮಾರುಕಟ್ಟೆಯಲ್ಲಿ ಅಪಾರ ನಷ್ಟ ಉಂಟಾಗಿದ್ದು, ತೈಲ ದರ 17 ವರ್ಷಗಳಲ್ಲೇ ಕನಿಷ್ಠಮೊತ್ತಕ್ಕೆ ಇಳಿದಿದೆ.

ತೈಲ ದರ ನಿರ್ಧರಿಸುವ ಅಂತರರಾಷ್ಟ್ರೀಯ ಬ್ರೆಂಟ್‌ ತೈಲ ಮಾರುಕಟ್ಟೆಯಲ್ಲಿ ಶೇ. 6.5 ರಷ್ಟು ಕುಸಿದಿದ್ದು,ಒಂದು ಬ್ಯಾರೆಲ್‌ ಬೆಲೆ ₹ 1730ಕ್ಕೆ (23 ಡಾಲರ್‌) ಇಳಿದಿದೆ. ಇದೇ ವೇಳೆ ಯುಎಸ್‌ ವೆಸ್ಟ್‌ ಟೆಕ್ಸಾಸ್‌ ಇಂಟರ್ಮಿಡಿಯೆಟ್‌ ಮಾರುಕಟ್ಟೆಯಲ್ಲಿ ಶೇ.5.3 ರಷ್ಟು ಕುಸಿತ ಕಂಡು, ಬ್ಯಾರಲ್‌ಗೆ ₹ 1500 (23 ಡಾಲರ್) ತಲುಪಿದೆ.

ಪ್ರಪಂಚದಾದ್ಯಂತಕೋವಿಡ್‌–19 ಸೋಂಕಿಗೆ ಬಲಿಯಾದವರೆ ಸಂಖ್ಯೆ ಇದೀಗ 33 ಸಾವಿರ ದಾಟಿದೆ.

ADVERTISEMENT

ಏಪ್ರಿಲ್‌ ಮಧ್ಯದಲ್ಲಿ ದೇಶಪರಿಸ್ಥಿತಿ ಸುಧಾರಿಸಲಿದೆ ಎಂದಿದ್ದ ಅಮೆರಿಕ ಅಧ್ಯಕ್ಷಡೊನಾಲ್ಡ್‌ ಟ್ರಂಪ್‌ ಇದೀಗ ಮಾತು ಬದಲಿಸಿದ್ದಾರೆ.ಜೂನ್‌ 1ರ ಒಳಗೆ ಚೇತರಿಕೆಯ ಹಾದಿಗೆ ಮರಳಲಿದ್ದೇವೆಎಂದಿದ್ದಾರೆ. ಸದ್ಯ ಏಪ್ರಿಲ್‌ 30ರ ವರೆಗೆ ಸಾಮಾಜಿಕಅಂತರ ಕಾಯ್ದುಕೊಳ್ಳುವಂತೆ ಅಮೆರಿಕದಲ್ಲಿ ನಿರ್ದೇಶನನೀಡಲಾಗಿದೆ.

ಅಮೆರಿಕದಲ್ಲಿ ಇದುವರೆಗೆ ಸುಮಾರು 1.4 ಲಕ್ಷ ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಸುಮಾರು 2,400 ಜನರು ಮೃತಪಟ್ಟಿದ್ದಾರೆ.

ಸೋಂಕು ಹರಡುವುದನ್ನುತಡೆಯಲು ಹಲವು ದೇಶಗಳು ಲಾಕ್‌ಡೌನ್‌ ಘೋಷಿಸಿವೆ. ಮಾತ್ರವಲ್ಲದೆ, ವಾಹನ ಸಂಚಾರ ನಿರ್ಬಂಧಿಸಿವೆ.ಇದು ತೈಲ ಬೇಡಿಕೆಕುಸಿಯಲುಕಾರಣವಾಗಿದೆ.

ಪ್ರಮುಖ ತೈಲ ಉತ್ಪಾದಕ ದೇಶಗಳಾದ ಸೌದಿ ಅರೇಬಿಯಾ ಮತ್ತು ರಷ್ಯಾದಲ್ಲಿ ಉತ್ಪಾದನೆ ನಿಲ್ಲಿಸುವ ಸಂಬಂಧ ಸ್ಪಷ್ಟ ನಿರ್ಧಾರಗಳನ್ನುಕೈಗೊಳ್ಳದಿರುವುದು ಬೇಡಿಕೆ ಕುಸಿತದ ನಡುವೆಯೂ ಪೂರೈಕೆಯಲ್ಲಿನ ಗಮನಾರ್ಹ ಹೆಚ್ಚಳಕ್ಕೆ ಕಾರಣವಾಗಿದೆ.

ಉತ್ಪಾದನೆ ಕಡಿತಗೊಳಿಸುವ ಸಂಬಂಧ ರಷ್ಯಾದೊಂದಿಗೆ ಮಾತುಕತೆ ನಡೆಸಿಲ್ಲ ಎಂದು ಸೌದಿ ಕಳೆದವಾರ ಪ್ರಕಟಿಸಿತ್ತು. ಇದೇ ವೇಳೆ ರಷ್ಯಾ ಇಂಧನ ಸಚಿವರು ಒಂದು ಬ್ಯಾರಲ್‌ಗೆ $ 25 ಡಾಲರ್‌ಗೆ (ಅಂದಾಜು ₹ 1880) ಕುಸಿದಿರುವುದು ತೈಲ ಉತ್ದಾಕದರಿಗೆ ದೊಡ್ಡ ಸಂಕಷ್ಟವೇನಲ್ಲ ಎಂದು ಹೇಳಿದ್ದರು.

ಉತ್ಪಾದನೆ ಕಡಿತಗೊಳಿಸುವ ವಿಚಾರದಲ್ಲಿ ಎರಡೂ ದೇಶಗಳು ಕಾದುನೋಡುವ ತಂತ್ರ ಮುಂದುವರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.