ADVERTISEMENT

ಜಿಎಸ್‌ಟಿ ದರ ಇಳಿಕೆ: ಹಳೆಯ ಎಂಆರ್‌ಪಿ ಉತ್ಪನ್ನಗಳ ದಾಸ್ತಾನು ಚಿಂತೆ

ಪಿಟಿಐ
Published 8 ಸೆಪ್ಟೆಂಬರ್ 2025, 16:08 IST
Last Updated 8 ಸೆಪ್ಟೆಂಬರ್ 2025, 16:08 IST
ಜಿಎಸ್‌ಟಿ ದರ ಇಳಿಕೆ ಅನಿವಾರ್ಯ ಆಗಿತ್ತು
ಜಿಎಸ್‌ಟಿ ದರ ಇಳಿಕೆ ಅನಿವಾರ್ಯ ಆಗಿತ್ತು   

ನವದೆಹಲಿ: ಚಾಲ್ತಿಯಲ್ಲಿರುವ ಜಿಎಸ್‌ಟಿ ದರಕ್ಕೆ ಅನುಗುಣವಾಗಿ ಎಂಆರ್‌ಪಿ ದರವನ್ನು ಮುದ್ರಿಸಿರುವ ಉತ್ಪನ್ನಗಳ ದಾಸ್ತಾನು ಎಫ್‌ಎಂಸಿಜಿ ಕಂಪನಿಗಳ ಬಳಿ ದೊಡ್ಡ ಮಟ್ಟದಲ್ಲಿ ಇದ್ದು ಅವುಗಳನ್ನು ಹೇಗೆ ಮಾರಾಟ ಮಾಡುವುದು ಎಂಬ ವಿಚಾರವಾಗಿ ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಬರುವುದಕ್ಕಾಗಿ ಕಂಪನಿಗಳು ಕಾದಿವೆ.

ಜಿಎಸ್‌ಟಿ ದರ ಇಳಿಕೆಯು ಸೆಪ್ಟೆಂಬರ್‌ 22ರಿಂದ ಜಾರಿಗೆ ಬರಲಿದೆ. ಆದರೆ ಈಗಿರುವ ಜಿಎಸ್‌ಟಿ ದರಕ್ಕೆ ಸರಿಹೊಂದುವ ಎಂಆರ್‌ಪಿ ನಮೂದಿಸಿ ಪ್ಯಾಕ್ ಮಾಡಲಾಗಿರುವ ಉತ್ಪನ್ನಗಳ ದಾಸ್ತಾನು ವರ್ತಕರ ಬಳಿಯೂ ಉಳಿದಿದೆ.

ಹಳೆಯ ಎಂಆರ್‌ಪಿ ಇರುವ ಉತ್ಪನ್ನಗಳನ್ನು ಸೆಪ್ಟೆಂಬರ್‌ 22ರ ನಂತರ ರಿಯಾಯಿತಿ ದರಕ್ಕೆ ಮಾರಾಟ ಮಾಡಲು ಕೇಂದ್ರವು ಅನುಮತಿ ನೀಡಲಿದೆ ಎಂಬ ಭರವಸೆಯು ಎಫ್‌ಎಂಸಿಜಿ ಉದ್ಯಮಕ್ಕೆ ಇದೆ. ‘ಏನು ಮಾಡಬೇಕು ಎಂಬ ಬಗ್ಗೆ ಎಲ್ಲರೂ ಅವಲೋಕನ ನಡೆಸುತ್ತಿದ್ದಾರೆ’ ಎಂದು ಇಮಾಮಿ ಕಂಪನಿಯ ಉಪಾಧ್ಯಕ್ಷ ಹಾಗೂ ಎಂ.ಡಿ. ಹರ್ಷವರ್ಧನ್ ಅಗರ್ವಾಲ್ ಅವರು ಹೇಳಿದ್ದಾರೆ.

ADVERTISEMENT

ಉತ್ಪನ್ನಗಳ ಎಂಆರ್‌ಪಿ ದರವನ್ನು ತಾನು ಬದಲಾಯಿಸುವುದಿಲ್ಲ. ಆದರೆ ಗ್ರಾಹಕರು ಉತ್ಪನ್ನಗಳ ಬಿಲ್‌ ಮಾಡಿಸುವಾಗ ಜಿಎಸ್‌ಟಿ ದರ ಇಳಿಕೆಗೆ ಸರಿಹೊಂದುವಂತೆ ರಿಯಾಯಿತಿ ನೀಡಲಾಗುತ್ತದೆ ಎಂದು ವಿ–ಮಾರ್ಟ್‌ ರಿಟೇಲ್‌ ಕಂಪನಿಯ ಅಧ್ಯಕ್ಷ ಮತ್ತು ಎಂ.ಡಿ. ಲಲಿತ್ ಅಗರ್ವಾಲ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.