ADVERTISEMENT

ಈರುಳ್ಳಿ ಉತ್ಪಾದನೆ ಹೆಚ್ಚಳ ನಿರೀಕ್ಷೆ

ಪಿಟಿಐ
Published 27 ಜನವರಿ 2020, 19:52 IST
Last Updated 27 ಜನವರಿ 2020, 19:52 IST
   

ನವದೆಹಲಿ :2019–20ನೇ ಬೆಳೆ ವರ್ಷದಲ್ಲಿ ಈರುಳ್ಳಿ ಉತ್ಪಾದನೆ ಹೆಚ್ಚಾಗಲಿದ್ದು, ಬೆಲೆಯಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ ಎಂದುಕೇಂದ್ರ ಸರ್ಕಾರ ಹೇಳಿದೆ.

ಉತ್ಪಾದನೆಯಲ್ಲಿ ಶೇ 7ರಷ್ಟು ಏರಿಕೆಯಾಗಲಿದ್ದು, 2.44 ಕೋಟಿ ಟನ್‌ಗಳಿಗೆ ತಲುಪಲಿದೆ. 2018–19ರಲ್ಲಿ 2.28 ಕೋಟಿ ಟನ್‌ಗಳಷ್ಟು ಉತ್ಪಾದನೆ ಆಗಿತ್ತು.

ಜುಲೈ– ಜೂನ್‌ ಅವಧಿಯಲ್ಲಿ 1.29 ಕೋಟಿ ಹೆಕ್ಟೇರ್‌ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿದೆ. ಕಳೆದ ವರ್ಷ 1.22 ಕೋಟಿ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿತ್ತು ಎಂದು ಕೃಷಿ ಸಚಿವಾಲಯ ಮಾಹಿತಿ ನೀಡಿದೆ.

ADVERTISEMENT

ಮುಂಗಾರಿನ ವಿಳಂಬ ಮತ್ತು ಅತಿಯಾದ ಮಳೆಯಿಂದಾಗಿ ಶೇ 22
ರಷ್ಟು ಬೆಳೆ ಹಾನಿಯಾಗಿತ್ತು. ಇದ
ರಿಂದ ಪೂರೈಕೆಯಲ್ಲಿ ಕೊರತೆ ಉಂಟಾಗಿ ಬೆಲೆಯಲ್ಲಿ ಭಾರಿ ಏರಿಕೆ ಕಂಡಿತ್ತು.

ಪೂರೈಕೆ ಹೆಚ್ಚಿಸಲು ಕೇಂದ್ರ ಸರ್ಕಾರ ಒಟ್ಟಾರೆ 36 ಸಾವಿರ ಟನ್‌ ಈರುಳ್ಳಿ ಆಮದು ಮಾಡಿಕೊಳ್ಳು
ತ್ತಿದೆ. ಇದರಲ್ಲಿ ಈಗಾಗಲೇ 18,500 ಟನ್‌ ಆಮದಾಗಿದೆ. ಇದರಿಂದಾಗಿ ಬೆಲೆಯಲ್ಲಿ ಇಳಿಕೆ ಆಗುತ್ತಿದೆ. ಪ್ರತಿ ಕೆ.ಜಿಗೆ
₹ 160ಕ್ಕೆ ತಲುಪಿದ್ದ ದರ ಈಗ ₹ 60ರ ಆಸುಪಾಸಿನಲ್ಲಿ ಮಾರಾಟವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.