
ಪ್ರಜಾವಾಣಿ ವಾರ್ತೆ
ಬೆಂಗಳೂರು: ವಿವಿಧ ಬಗೆಯ ಆಹಾರ ಉತ್ಪನ್ನಗಳನ್ನು ತಯಾರಿಸುವ ಎಂಟಿಆರ್ ಬ್ರ್ಯಾಂಡ್ ಮಾಲೀಕತ್ವ ಹೊಂದಿರುವ ಒರ್ಕ್ಲಾ ಇಂಡಿಯಾ ಕಂಪನಿಯು ಸಾರ್ವಜನಿಕರಿಗೆ ಖರೀದಿಗೆ ಮುಕ್ತವಾಗಿಸಿರುವ ಅಷ್ಟೂ ಷೇರುಗಳಿಗೆ ಹೂಡಿಕೆದಾರರಿಂದ ಬಿಡ್ ಬಂದಿವೆ ಎಂದು ಕಂಪನಿಯ ಸಿಇಒ ಸಂಜಯ್ ಶರ್ಮಾ ತಿಳಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಒರ್ಕ್ಲಾ ಒಡೆತನದ ಎಂಟಿಆರ್ ಮತ್ತು ಈಸ್ಟರ್ನ್ ಬ್ರ್ಯಾಂಡ್ ಉತ್ಪನ್ನಗಳನ್ನು ಕರ್ನಾಟಕದ ಹಾಗೂ ಕೇರಳದ ಪ್ರತಿ 10 ಕುಟುಂಬಗಳ ಪೈಕಿ 9 ಕುಟುಂಬಗಳು ಬಳಸುತ್ತಿವೆ’ ಎಂದು ಹೇಳಿದರು.
ಒರ್ಕ್ಲಾ ಕಂಪನಿಯು ಆರಂಭಿಕ ಹೂಡಿಕೆದಾರರಿಂದ ಸರಿಸುಮಾರು ₹500 ಕೋಟಿ ಸಂಗ್ರಹಿಸಿದೆ. ಕಂಪನಿಯು ಐಪಿಒ ಮೂಲಕ ₹1,667 ಕೋಟಿ ಸಂಗ್ರಹಿಸುತ್ತಿದೆ. ಐಪಿಒಗೆ ಬಿಡ್ ಸಲ್ಲಿಸಲು ಶುಕ್ರವಾರ ಕಡೆಯ ದಿನ. ಪ್ರತಿ ಷೇರಿನ ಬೆಲೆಯನ್ನು ₹695–730ಕ್ಕೆ ನಿಗದಿ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.