ADVERTISEMENT

ಪ್ಯಾನ್‌ಗೆ ಆಧಾರ್‌ ಜೋಡಣೆ ಗಡುವು 2020ರ ಮಾರ್ಚ್‌ವರೆಗೆ ವಿಸ್ತರಣೆ

ಪಿಟಿಐ
Published 31 ಡಿಸೆಂಬರ್ 2019, 5:05 IST
Last Updated 31 ಡಿಸೆಂಬರ್ 2019, 5:05 IST
ಆಧಾರ್‌ ಹಾಗೂ ಪ್ಯಾನ್‌
ಆಧಾರ್‌ ಹಾಗೂ ಪ್ಯಾನ್‌    

ನವದೆಹಲಿ: ಆಧಾರ್‌ಗೆ ಶಾಶ್ವತ ಖಾತೆ ಸಂಖ್ಯೆ (ಪ್ಯಾನ್‌) ಜೋಡಿಸುವ ಗಡುವನ್ನು 2020ರ ಮಾರ್ಚ್‌ ಅಂತ್ಯದವರೆಗೆ ವಿಸ್ತರಿಸಲಾಗಿದೆ.

ಈ ಮೊದಲಿನ ಗಡುವು ಇದೇ ತಿಂಗಳ 31ಕ್ಕೆ (ನಾಳೆ) ಕೊನೆಗೊಳ್ಳಲಿತ್ತು. ಗಡುವು ವಿಸ್ತರಣೆ ಸಂಬಂಧ ಅಧಿಸೂಚನೆ ಹೊರಡಿಸಲಾಗಿದೆ ಎಂದು ನೇರ ತೆರಿಗೆ ಕೇಂದ್ರೀಯ ಮಂಡಳಿಯು (ಸಿಬಿಡಿಟಿ) ತಿಳಿಸಿದೆ.

ಯಾವುದೇ ಅಡೆತಡೆ ಇಲ್ಲದೆ ಆದಾಯ ತೆರಿಗೆಯ ಸೇವೆಗಳ ಪ್ರಯೋಜನಗಳನ್ನು ಪಡೆದುಕೊಳ್ಳಲು ಪ್ಯಾನ್‌ಗೆ ಆಧಾರ್‌ ಜೋಡಿಸುವಂತೆ ತಿಳಿಸಿದೆ.ಈ ಪ್ರಕ್ರಿಯೆಗೆ ಇದುವರೆಗೆ ಒಟ್ಟಾರೆ ಎಂಟು ಬಾರಿ ಗಡುವು ವಿಸ್ತರಣೆ ಮಾಡಲಾಗಿದೆ. ಆದಾಯ ತೆರಿಗೆ ಪಾವತಿದಾರರು ಪ್ಯಾನ್‌ಗೆ ಆಧಾರ್‌ ಜೋಡಿಸುವುದು ಆದಾಯ ತೆರಿಗೆ ಕಾಯ್ದೆ ಪ್ರಕಾರ ಕಡ್ಡಾಯವಾಗಿದೆ.

ಕೇಂದ್ರ ಸರ್ಕಾರದ ಆಧಾರ್‌ ಕಾರ್ಯಕ್ರಮ ಸಾಂವಿಧಾನ ಸಿಂಧುತ್ವ ಹೊಂದಿರುವುದಾಗಿ ಕಳೆದ ವರ್ಷ ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ಪ್ಯಾನ್‌ ಪಡೆಯಲು ಹಾಗೂ ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆಯಲ್ಲಿ ಆಧಾರ್‌ ಕಡ್ಡಾಯ ಮುಂದುವರಿಯಲಿದೆ ಎಂದು ಕೋರ್ಟ್‌ ತಿಳಿಸಿತ್ತು.

ಆದಾಯ ತೆರಿಗೆ ಕಾಯ್ಡೆ ಸೆಕ್ಷನ್‌ 139 ಎಎ(2)ರ ಪ್ರಕಾರ ಪ್ಯಾನ್‌ ಹೊಂದಿರುವ ವ್ಯಕ್ತಿಯು ಆಧಾರ್‌ ಪಡೆಯಲು ಅರ್ಹರಾಗಿರುತ್ತಾರೆ ಹಾಗೂ ತೆರಿಗೆ ಇಲಾಖೆಗೆ ಆಧಾರ್‌ ಸಂಖ್ಯೆ ನೀಡುವುದು ಕಡ್ಡಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.