ADVERTISEMENT

ಎನ್‌ಪಿಎಸ್‌: ಭಾಗಶಃ ಹಣ ವಾಪಸ್‌ಗೆ ಅನುಮತಿ

ಪಿಟಿಐ
Published 10 ಏಪ್ರಿಲ್ 2020, 21:31 IST
Last Updated 10 ಏಪ್ರಿಲ್ 2020, 21:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ‘ಕೋವಿಡ್‌–19’ ಚಿಕಿತ್ಸೆಗೆ ಸಂಬಂಧಿಸಿದ ವೆಚ್ಚಗಳನ್ನು ಭರಿಸಲು ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿನ (ಎನ್‌ಪಿಎಸ್‌) ಭಾಗಶಃ ಹಣವನ್ನು ಹಿಂದೆ ಪಡೆಯಲು ಅನುಮತಿ ನೀಡಲಾಗಿದೆ.

ಕೇಂದ್ರ ಸರ್ಕಾರವು ‘ಕೋವಿಡ್‌–19’, ಪಿಡುಗು ಎಂದು ಘೋಷಿಸಿರುವುದರಿಂದ ಕೊರೊನಾ ವೈರಾಣು ಸೋಂಕು ತಗುಲುವುದನ್ನು ಜೀವಕ್ಕೆ ಅಪಾಯ ತಂದೊಡ್ಡುವ ಗಂಭೀರ ಸ್ವರೂಪದ ಕಾಯಿಲೆ ಎಂದು ಪರಿಗಣಿಸಲಾಗಿದೆ. 'ಎನ್‌ಪಿಎಸ್‌" ಚಂದಾದಾರರ ಸಂಗಾತಿ, ಮಕ್ಕಳು, ಅವಲಂಬಿತ ಪಾಲಕರ ಚಿಕಿತ್ಸೆಗಾಗಿ ಹಣ ಹಿಂದೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಪಿಎಫ್‌ಆರ್‌ಡಿಎ) ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಈ ನಿಯಮ ಸಡಿಲಿಕೆಯು, ‘ಅಟಲ್‌ ಪೆನ್ಶನ್‌ ಯೋಜನೆ’ಯ ಚಂದಾದಾರರಿಗೆ ಅನ್ವಯಿಸುವುದಿಲ್ಲ. ಸದ್ಯಕ್ಕೆ ದೇಶದಲ್ಲಿ 1.35 ಕೋಟಿ ಎನ್‌ಪಿಎಸ್‌ ಚಂದಾದಾರರು ಇದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.