ADVERTISEMENT

ಪೇಟಿಎಂ: ಟಿಕೆಟ್ ಬುಕಿಂಗ್ ದಾಖಲೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2019, 20:11 IST
Last Updated 29 ಜನವರಿ 2019, 20:11 IST
   

ಬೆಂಗಳೂರು: 2016ರಲ್ಲಿ ಬಸ್ ಮತ್ತು ವಿಮಾನ ಟಿಕೆಟ್ ಬುಕಿಂಗ್ ಸೇವೆ ಆರಂಭಿಸಿದ ಪೇಟಿಎಂ, 2018ರ ಹೊತ್ತಿಗೆ ದೇಶದಾದ್ಯಂತ ಒಟ್ಟು 10 ಕೋಟಿ ಟಿಕೆಟ್‌ಗಳನ್ನು ಕಾಯ್ದಿರಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ.

ಆ್ಯಪ್‌ ಮತ್ತು ಅಂತರ್ಜಾಲದಲ್ಲಿ ಅತ್ಯಂತ ವೇಗವಾಗಿ ಇಂತಹ ದಾಖಲೆ ಸ್ಥಾಪಿಸಿದ ಶ್ರೇಯಸ್ಸನ್ನು ಕಂಪನಿಯು ತನ್ನದಾಗಿಸಿಕೊಂಡಿದೆ.

ಕಂಪನಿ ಒದಗಿಸುತ್ತಿರುವ ಟಿಕೆಟ್ ಕಾಯ್ದಿರಿಸುವಿಕೆ ಸೇವೆಯು ಹಲವು ಸೌಲಭ್ಯಗಳನ್ನು ಒಳಗೊಂಡಿದೆ. ವಿಮಾನ ಮತ್ತು ಬಸ್ ಟಿಕೆಟ್‌ಗಳನ್ನು ಕೊನೆ ಕ್ಷಣಗಳಲ್ಲಿ ರದ್ದುಪಡಿಸಿದರೂ ಪ್ರಯಾಣಿಕರ ಮೇಲೆ ಯಾವುದೇ ಶುಲ್ಕ ಕಡಿತವಾಗುವುದಿಲ್ಲ. ರೈಲು ಟಿಕೆಟ್ ಕಾಯ್ದಿರಿಸುವಿಕೆಗೆ ಸೇವಾಶುಲ್ಕ ತೆಗೆದುಕೊಳ್ಳುತ್ತಿಲ್ಲ.

ADVERTISEMENT

ಟಿಕೆಟ್ ರದ್ದತಿಯ ಸಂದರ್ಭಗಳಲ್ಲಿ ಕೂಡಲೇ ಹಣ ಮರುಪಾವತಿಸುವ ಸೌಲಭ್ಯ ಇದೆ’ ಎಂದು ಸಂಸ್ಥೆಯ ಉಪಾಧ್ಯಕ್ಷ ಅಭಿಷೇಕ್ ರಾಜನ್ ಹೇಳಿದ್ದಾರೆ.

***

ಸ್ವಮಾನ್ ಫೈನಾನ್ಶಿಯಲ್ ಸರ್ವೀಸಸ್ ಕಂಪನಿ ಆರಂಭ

ಬೆಂಗಳೂರು: ಗ್ರಾಮೀಣ ಪ್ರದೇಶದ ಮಹಿಳೆಯರು ಮತ್ತು ಸಣ್ಣ ಉದ್ದಿಮೆಗಳ ಆರ್ಥಿಕ ಸೇರ್ಪಡೆಗೆ ಉತ್ತೇಜನ ನೀಡುವ ಉದ್ದೇಶದಿಂದ ಸ್ವಮಾನ್ ಫೈನಾನ್ಶಿಯಲ್ ಸರ್ವೀಸಸ್ ಹೆಸರಿನ ಸಣ್ಣ ಹಣಕಾಸು ಕಂಪನಿಯು ರಾಜ್ಯದಲ್ಲಿ ತನ್ನ ವಹಿವಾಟು ಆರಂಭಿಸಲಿದೆ.

‘ಬ್ಯಾಂಕಿಂಗ್ ಸೇವೆಗಳು ಇಲ್ಲದಿರುವ ಪ್ರದೇಶಗಳ ಜನರಿಗೆ ಹಣಕಾಸು ನೆರವು ನೀಡಲಿದೆ. ಆರಂಭದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ತನ್ನ ವಹಿವಾಟು ವಿಸ್ತರಿಸಲು ಉದ್ದೇಶಿಸಿದೆ’ ಎಂದು ಸಂಸ್ಥೆಯ ಸ್ಥಾಪಕಿ ಅನುಶ್ರೀ ಜಿಂದಾಲ್ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.