ADVERTISEMENT

ದೇಶದಾದ್ಯಂತ 17ನೇ ಬಾರಿ ಪೆಟ್ರೊಲ್, ಡೀಸೆಲ್‌ ಬೆಲೆ ಏರಿಕೆ

ಪೆಟ್ರೋಲ್ ಲೀಟರ್‌ಗೆ 26 ಪೈಸೆ, ಡೀಸೆಲ್‌ ಬೆಲೆ ಲೀಟರ್‌ಗೆ 25 ಪೈಸೆ ಹೆಚ್ಚಳ

ಪಿಟಿಐ
Published 1 ಜೂನ್ 2021, 8:17 IST
Last Updated 1 ಜೂನ್ 2021, 8:17 IST
ತೈಲದರ ಹೆಚ್ಚಳ
ತೈಲದರ ಹೆಚ್ಚಳ   

ನವದೆಹಲಿ: ದೇಶದಾದ್ಯಂತ ಮಂಗಳವಾರ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್‌ ಬೆಲೆ ಏರಿಕೆಯಾಗಿದ್ದು, ಈ ಮೂಲಕ ಒಂದು ತಿಂಗಳಲ್ಲಿ 17ನೇ ಬಾರಿ ತೈಲ ಬೆಲೆ ಏರಿಕೆಯಾದಂತಾಗಿದೆ.

ಸರ್ಕಾರಿ ಸ್ವಾಮ್ಯದ ಚಿಲ್ಲರೆ ತೈಲ ಮಾರಾಟಗಾರರ ಅಧಿಸೂಚನೆ ಪ್ರಕಾರ ಪೆಟ್ರೋಲ್ ಬೆಲೆ ಲೀಟರ್‌ಗೆ 26 ಪೈಸೆ ಮತ್ತು ಡೀಸೆಲ್‌ ಬೆಲೆ ಲೀಟರ್‌ಗೆ 25 ಪೈಸದಷ್ಟು ಏರಿಕೆಯಾಗಿದೆ. ಹೊಸ ದರದ ಪ್ರಕಾರ ದೆಹಲಿಯಲ್ಲಿ ಪೆಟ್ರೊಲ್ ಬೆಲೆ ಲೀಟರ್‌ಗೆ ₹ 94.49, ಡೀಸೆಲ್‌ ಬೆಲೆ ಲೀಟರ್‌ಗೆ ₹85.38ರಷ್ಟಾಗಿದೆ.

ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ಹಲವಾರು ನಗರಗಳಲ್ಲಿ ಈಗಾಗಲೇ ಪೆಟ್ರೋಲ್‌ ಬೆಲೆ ಲೀಟರ್‌ಗೆ ₹ 100 ದಾಟಿದೆ. ಪರಿಷ್ಕೃತ ತೈಲ ದರದ ಪ್ರಕಾರ ಮುಂಬೈನಲ್ಲಿ ಪೆಟ್ರೋಲ್ ಲೀಟರ್‌ಗೆ ₹100.72 ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ ₹92.69.

ADVERTISEMENT

ಒಂದು ತಿಂಗಳಲ್ಲಿಪೆಟ್ರೊಲ್ ಬೆಲೆ ಪ್ರತಿ ಲೀಟರ್‌ಗೆ ₹4.09 ಹಾಗೂ ಡೀಸೆಲ್‌ ಪ್ರತಿ ಲೀಟರ್‌ಗೆ ₹4.65 ರಷ್ಟು ಹೆಚ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.