ADVERTISEMENT

ತೈಲ ಬೆಲೆ ಏರಿಕೆ: ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರವು ₹ 107.14

ಪಿಟಿಐ
Published 8 ಅಕ್ಟೋಬರ್ 2021, 11:42 IST
Last Updated 8 ಅಕ್ಟೋಬರ್ 2021, 11:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಶುಕ್ರವಾರ ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 30 ಪೈಸೆ, ಡೀಸೆಲ್ ಬೆಲೆಯನ್ನು 35 ಪೈಸೆಯಷ್ಟು ಹೆಚ್ಚಳ ಮಾಡಿವೆ.

ಈ ಹೆಚ್ಚಳದ ಪರಿಣಾಮವಾಗಿ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರವು ₹ 107.14 ಆಗಿದೆ. ಡೀಸೆಲ್ ದರವು ಶತಕದ ಕಡೆ ಸಾಗಿದ್ದು, ₹ 97.77 ಆಗಿದೆ.

ತೈಲೋತ್ಪನ್ನಗಳ ಬೆಲೆಯನ್ನು ಸಣ್ಣ ಪ್ರಮಾಣದಲ್ಲಿ ಏರಿಸುತ್ತಿದ್ದ ಕಂಪನಿಗಳು, ಬುಧವಾರದ ನಂತರ ದೊಡ್ಡ ಮಟ್ಟದಲ್ಲಿ ಹೆಚ್ಚಳ ಮಾಡಲಾರಂಭಿಸಿವೆ. ಸತತ ಮೂರು ದಿನಗಳಿಂದ ಪೆಟ್ರೋಲ್ ದರವನ್ನು ಪ್ರತಿ ದಿನ 30 ಪೈಸೆಯಷ್ಟು, ಡೀಸೆಲ್ ಬೆಲೆಯನ್ನು ಪ್ರತಿ ದಿನ 35 ಪೈಸೆಯಷ್ಟು ಹೆಚ್ಚಿಸಿವೆ.

ADVERTISEMENT

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ 82 ಡಾಲರ್ ಗಡಿ ದಾಟಿದೆ. ಒಂದು ತಿಂಗಳ ಹಿಂದೆ ಇದರ ಬೆಲೆಯು 72 ಡಾಲರ್ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.