ADVERTISEMENT

ಸತತ ಮೂರನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

ಪಿಟಿಐ
Published 22 ನವೆಂಬರ್ 2020, 7:56 IST
Last Updated 22 ನವೆಂಬರ್ 2020, 7:56 IST
ಸಾಂದರ್ಭಿಕ ಚಿತ್ರ – ರಾಯಿಟರ್ಸ್
ಸಾಂದರ್ಭಿಕ ಚಿತ್ರ – ರಾಯಿಟರ್ಸ್   

ನವದೆಹಲಿ: ಪೆಟ್ರೋಲ್ ದರ ಭಾನುವಾರ ಪ್ರತಿ ಲೀಟರ್‌ಗೆ 8 ಪೈಸೆ ಮತ್ತು ಡೀಸೆಲ್‌ ದರ ಪ್ರತಿ ಲೀಟರ್‌ಗೆ 19 ಪೈಸೆಯಷ್ಟು ಏರಿಕೆಯಾಗಿದೆ. ಇದರೊಂದಿಗೆ, ಉಭಯ ಇಂಧನ ದರ ಸತತ ಮೂರನೇ ದಿನ ಏರಿಕೆಯಾದಂತಾಗಿದೆ.

ಅಂತರರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಸುಮಾರು ಎರಡು ತಿಂಗಳ ಬಳಿಕ ದರ ಪರಿಷ್ಕರಣೆಯಾಗಿದೆ. ಪರಿಣಾಮವಾಗಿ ದೇಶದಲ್ಲಿಯೂ ದರ ಪರಿಷ್ಕರಿಸಲಾಗಿದೆ.

ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ಈಗ ₹81.46 ಆಗಿದೆ. ಪ್ರತಿ ಲೀಟರ್ ಡೀಸೆಲ್ ದರ 81.38 ಆಗಿದೆ ಎಂದು ತೈಲ ಮಾರುಕಟ್ಟೆ ಕಂಪನಿಗಳ ಪ್ರಕಟಣೆ ತಿಳಿಸಿದೆ.

ಪೆಟ್ರೋಲ್ ದರವು ಸೆಪ್ಟೆಂಬರ್‌ 22ರಿಂದ ಮತ್ತು ಡೀಸೆಲ್ ದರವು ಅಕ್ಟೋಬರ್ 2ರಿಂದ ಸ್ಥಿರವಾಗಿತ್ತು. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಶುಕ್ರವಾರದಿಂದ ದರ ಹೆಚ್ಚಳ ಮಾಡುತ್ತಿವೆ. ಮೂರು ದಿನಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 40 ಪೈಸೆ ಹಾಗೂ ಡೀಸೆಲ್ ದರ 61 ಪೈಸೆ ಏರಿಕೆಯಾಗಿದೆ.

ಮುಂಬೈಯಲ್ಲಿ ಭಾನುವಾರ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ ₹88.09ರಿಂದ ₹88.16ಕ್ಕೆ ಏರಿಕೆಯಾಗಿದೆ. ಡೀಸೆಲ್ ದರ ಪ್ರತಿ ಲೀಟರ್‌ಗೆ ₹77.34ರಿಂದ ₹77.54ಕ್ಕೆ ಏರಿಕೆಯಾಗಿದೆ.

ಸ್ಥಳೀಯ ತೆರಿಗೆ ಅಥವಾ ವ್ಯಾಟ್‌ಗೆ ಅನುಗುಣವಾಗಿ ರಾಜ್ಯಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಭಿನ್ನವಾಗಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.