ADVERTISEMENT

ಸತತ 20ನೇ ದಿನ ಪೆಟ್ರೋಲ್‌ 21 ಪೈಸೆ, ಡೀಸೆಲ್‌ 17 ಪೈಸೆ ಏರಿಕೆ

ಏಜೆನ್ಸೀಸ್
Published 26 ಜೂನ್ 2020, 1:18 IST
Last Updated 26 ಜೂನ್ 2020, 1:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಹೆಚ್ಚಳವು ಸತತ 20ನೇ ದಿನವೂ ಮುಂದುವರೆದಿದ್ದು, ಶುಕ್ರವಾರ ಕ್ರಮವಾಗಿ 21 ಪೈಸೆ ಮತ್ತು 17 ಪೈಸೆ ಏರಿಕೆಯಾಗಿದೆ.

ನಿರಂತರ ಹೆಚ್ಚಳದಿಂದ ಡೀಸೆಲ್‌ ಬೆಲೆ ಪ್ರತಿ ಲೀಟರ್‌ಗೆ ಈಗ ₹10.80ರಷ್ಟು ಮತ್ತು ಪೆಟ್ರೋಲ್‌ ಬೆಲೆ ₹8.42ರಷ್ಟು ಹೆಚ್ಚಳವಾಗಿದೆ. ಸದ್ಯ ಬೆಂಗಳೂರಿನಲ್ಲಿ ಡೀಸೆಲ್‌ ಬೆಲೆ ₹76.09 ಮತ್ತು ಪೆಟ್ರೋಲ್‌ ಬೆಲೆ ₹82.52 ಕ್ಕೆ ತಲುಪಿದೆ.

ದೆಹಲಿಯಲ್ಲಿ ಡೀಸೆಲ್‌ ದರ ₹80.13 ಮತ್ತು ಪೆಟ್ರೋಲ್‌ ದರ ₹80.19ಕ್ಕೆ ಏರಿಕೆಯಾಗಿದೆ. ಇತ್ತ ಮುಂಬೈನಲ್ಲಿ ಡೀಸೆಲ್‌ ದರ ₹77.76 ಮತ್ತು ಪೆಟ್ರೋಲ್‌ ದರ ₹86.54ಕ್ಕೆ ಹೆಚ್ಚಳವಾಗಿದೆ.

ADVERTISEMENT

ಲಾಕ್‌ಡೌನ್ ಸಡಿಲಗೊಳಿಸಿದ ಬಳಿಕ ಚೇತರಿಸಿಕೊಳ್ಳಲು ಹೆಣಗಾಡುತ್ತಿರುವ ಸಾರಿಗೆ ಉದ್ಯಮಕ್ಕೆ ಇಂಧನ ದರ ಏರಿಕೆಯಿಂದದೊಡ್ಡ ಹೊಡೆತ ಬಿದ್ದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.