ADVERTISEMENT

ಪೆಟ್ರೋಲ್, ಡೀಸೆಲ್ ಬೆಲೆ ಎರಡನೇ ದಿನ ಏರಿಕೆ: ಬೆಂಗಳೂರಿನಲ್ಲಿ ಎಷ್ಟಿದೆ ದರ?

​ಪ್ರಜಾವಾಣಿ ವಾರ್ತೆ
Published 5 ಮೇ 2021, 3:22 IST
Last Updated 5 ಮೇ 2021, 3:22 IST
ಸಾಂದರ್ಭಿಕ ಚಿತ್ರ (ಕೃಪೆ: ಐಸ್ಟಾಕ್)
ಸಾಂದರ್ಭಿಕ ಚಿತ್ರ (ಕೃಪೆ: ಐಸ್ಟಾಕ್)   

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ ಕ್ರಮವಾಗಿ 22 ಪೈಸೆ ಮತ್ತು 39 ಪೈಸೆ ಹೆಚ್ಚಾಗಿದೆ. ದೆಹಲಿಯಲ್ಲೀಗ ಪೆಟ್ರೋಲ್ ದರ ₹90.74 ಮತ್ತು ಡೀಸೆಲ್ ದರ ₹81.12 ಆಗಿದೆ.

ಬೆಂಗಳೂರಿನಲ್ಲೀಗ ಪೆಟ್ರೋಲ್ ಬೆಲೆ ₹93.77 ಹಾಗೂ ಡೀಸೆಲ್ ಬೆಲೆ ₹86.01 ಆಗಿದೆ.

ಮುಂಬೈಯಲ್ಲಿ ಪೆಟ್ರೋಲ್ ದರ ₹97.12, ಡೀಸೆಲ್ ದರ ₹88.19 ಆಗಿದೆ. ಚೆನ್ನೈಯಲ್ಲಿ ಪೆಟ್ರೋಲ್ ಬೆಲೆ ₹92.70 ಆಗಿದ್ದು, ಡೀಸೆಲ್ ಬೆಲೆ ₹86.09 ಆಗಿದೆ. ಕೋಲ್ಕತ್ತದಲ್ಲಿ ಪೆಟ್ರೋಲ್, ಡೀಸೆಲ್ ದರ ಕ್ರಮವಾಗಿ ₹90.92 ಹಾಗೂ ₹83.98 ಆಗಿದೆ.

ADVERTISEMENT

ಮಂಗಳವಾರವೂ ಪೆಟ್ರೋಲ್, ಡೀಸೆಲ್ ದರ 15 ಪೈಸೆ ಹಾಗೂ 18 ಪೈಸೆ ಏರಿಕೆಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.