
ಪಿಟಿಐನವದೆಹಲಿ: ದೇಶದ ಹಣಕಾಸು ತಂತ್ರಜ್ಞಾನ ಕಂಪನಿ ‘ಫೋನ್‌ಪೇ’ ತನ್ನ ಬಳಕೆದಾರರಿಗೆ ಚಾಟ್‌ಜಿಪಿಟಿ ಸೌಲಭ್ಯಗಳನ್ನು ಕಲ್ಪಿಸಲು ಅಮೆರಿಕದ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ (ಎ.ಐ) ಕಂಪನಿ ಓಪನ್‌ಎಐ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ.
ಫೋನ್‌ಪೇ ಗ್ರಾಹಕರ ಆ್ಯಪ್ ಮತ್ತು ಫೋನ್‌ಪೆ ಬಿಸಿನೆಸ್ ಆ್ಯಪ್ ಮೂಲಕವೇ ‘ಚಾಟ್‌ಜಿಪಿಟಿ’ಯ ಆಧುನಿಕ ಎ.ಐ ಸೌಲಭ್ಯವನ್ನು ಬಳಕೆದಾರರು ಪಡೆದುಕೊಳ್ಳಬಹುದು ಎಂದು ಕಂಪನಿ ಗುರುವಾರ ತಿಳಿಸಿದೆ.
ಇದು ಬಳಕೆದಾರರಿಗೆ ಪ್ರವಾಸದ ಯೋಜನೆ ರೂಪಿಸುವುದರಿಂದ ಆರಂಭಿಸಿ ಶಾಪಿಂಗ್ ನಡೆಸುವುದರವರೆಗಿನ ದಿನನಿತ್ಯದ ಅಗತ್ಯಗಳಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಒದಗಿಸುತ್ತದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.