ಪಾವತಿ ಬ್ಯಾಂಕ್ ತೆರೆಯಲು ಪೇಟಿಎಂ ನಿರ್ಧಾರ: ಬದಲಾಗಲಿವೆ ಮೊಬೈಲ್ ವ್ಯಾಲೆಟ್ ಖಾತೆಗಳು
ಮುಂಬೈ: ಫೆಬ್ರುವರಿ 29ರ ಬಳಿಕ ಎಲ್ಲ ಬಗೆಯ ಸೇವೆಗಳನ್ನು ಸ್ಥಗಿತಗೊಳಿಸುವಂತೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ (PPBL) ವಿಧಿಸಿದ್ದ ನಿರ್ಬಂಧವನ್ನು ಭಾರತೀಯ ರಿಸರ್ವ್ ಬ್ಯಾಂಕ್, ಮಾರ್ಚ್ 15ರ ವರೆಗೆ ವಿಸ್ತರಿಸಿದೆ.
ಪೇಟಿಎಂ ಬಳಕೆದಾರರ ಖಾತೆಗಳು, ಪ್ರೀಪೇಯ್ಡ್ ಪೇಮೆಂಟ್, ವ್ಯಾಲೆಟ್ ಹಾಗೂ ಫಾಸ್ಟ್ಯಾಗ್‌ಗಳಿಗೆ ಯಾವುದೇ ಠೇವಣಿ ಅಥವಾ ಟಾಪ್ ಅಪ್‌ಗಳನ್ನು ಸ್ವೀಕರಿಸದಂತೆ ಆರ್‌ಬಿಐ ನಿರ್ಬಂಧ ಹೇರಿತ್ತು.
ಆದರೆ, ಪೇಟಿಎಂ ಸೇವೆ ಬಳಸುತ್ತಿರುವ ವ್ಯಾಪಾರಿಗಳು ಹಾಗೂ ಗ್ರಾಹಕರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಈ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.
ಪೇಟಿಎಂ ಬ್ಯಾಂಕ್‌ಗೆ ವಿಧಿಸಿರುವ ನಿರ್ಬಂಧಕ್ಕೆ ಸಂಬಂಧಿಸಿದಂತೆ ಜನಸಾಮಾನ್ಯರು ಕೇಳಿದ ಪ್ರಶ್ನೆಗಳಿಗೆ ಆರ್‌ಬಿಐ ಉತ್ತರಗಳನ್ನೂ ಬಿಡುಗಡೆ ಮಾಡಿದೆ.
ಅತ್ತ ಪೇಟಿಎಂ ಪೇಮೆಂಟ್ ಬ್ಯಾಂಕ್‌ನಿಂದ ಫಾಸ್ಟ್ಯಾಗ್ ಖರೀದಿಸದಂತೆ ಹೆದ್ದಾರಿ ಬಳಕೆದಾರರಿಗೆ, ಭಾರತೀಯ ಹೆದ್ದಾರಿ ನಿರ್ವಹಣಾ ಕಂಪನಿಯು (ಐಎಚ್‌ಎಂಸಿಎಲ್) ಸೂಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.