ರಘುರಾಂ ರಾಜನ್ –ಪಿಟಿಐ ಚಿತ್ರ
ನವದೆಹಲಿ: 16ನೇ ಹಣಕಾಸು ಆಯೋಗವು ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಹೆಚ್ಚು ಅನುದಾನ ಸಿಗುವಂತೆ ನೋಡಿಕೊಳ್ಳಬೇಕು ಎಂದು ಆರ್‌ಬಿಐ ಮಾಜಿ ಗವರ್ನರ್ ರಘುರಾಂ ರಾಜನ್ ಹೇಳಿದ್ದಾರೆ.
‘ಹಿಂದಿನ ಹಣಕಾಸು ಆಯೋಗಗಳು ರಾಜ್ಯಗಳಿಗೆ ಹೆಚ್ಚಿನ ಅನುದಾನ ಸಿಗುವಂತೆ ನೋಡಿಕೊಂಡವು. ಈಗ ನಾವು ಪೌರಾಡಳಿತ ಸಂಸ್ಥೆಗಳು, ಪಂಚಾಯಿತಿಗಳಿಗೆ ಹೆಚ್ಚಿನ ಅನುದಾನ ದೊರೆಕಿಸುವ ಬಗ್ಗೆ ಗಮನ ನೀಡಬೇಕಿದೆ’ ಎಂದು ಅವರು ಪಿಟಿಐಗೆ ಹೇಳಿದ್ದಾರೆ.
ಅಮೆರಿಕ ಮತ್ತು ಚೀನಾದ ಉದಾಹರಣೆಯನ್ನು ನೀಡಿದ ರಾಜನ್ ಅವರು, ಈ ಎರಡು ದೇಶಗಳಲ್ಲಿ ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿನ ನೌಕರರ ಒಟ್ಟು ಪ್ರಮಾಣವು ಭಾರತದ ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿನ ನೌಕರರ ಪ್ರಮಾಣಕ್ಕಿಂತ ಹೆಚ್ಚಾಗಿದೆ ಎಂದರು.
ಭಾರತದಂತಹ ದೊಡ್ಡ ದೇಶದಲ್ಲಿ ವಿಕೇಂದ್ರೀಕರಣವು ಇನ್ನಷ್ಟು ಹೆಚ್ಚಬೇಕು. ಇದನ್ನು 16ನೇ ಹಣಕಾಸು ಆಯೋಗವು ಸಾಧ್ಯವಾಗಿಸಬೇಕು. ದಾನ ಮಾರ್ಗದಿಂದ ಅಥವಾ ದಂಡ ಮಾರ್ಗದಿಂದ ಅದನ್ನು ಸಾಧಿಸಬೇಕು ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.