ADVERTISEMENT

SwaRail ಸೂಪರ್ ಆ್ಯಪ್ ಬಿಡುಗಡೆಗೊಳಿಸಿದ ರೈಲ್ವೆ; ಪರೀಕ್ಷಾರ್ಥ ಬಳಕೆ ಆರಂಭ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2025, 3:58 IST
Last Updated 1 ಫೆಬ್ರುವರಿ 2025, 3:58 IST
<div class="paragraphs"><p>ರೈಲು</p></div>

ರೈಲು

   

– ಪ್ರಜಾವಾಣಿ ಚಿತ್ರ

ನವದೆಹಲಿ: ಭಾರತೀಯ ರೈಲ್ವೆಗೆ ಸಂಬಂಧಿಸಿದ ಎಲ್ಲ ಮಾಹಿತಿಗೆ ಒಂದೇ ಕಡೆ ಸೇವೆಯನ್ನು ಒದಗಿಸುವ SwaRail ಆ್ಯಪ್ ಅನ್ನು ಇಲಾಖೆಯು ಬಿಡುಗಡೆಗೊಳಿಸಿದೆ. ಅಲ್ಲದೆ ಪರೀಕ್ಷಾರ್ಥ ಬಳಕೆಯು ಆರಂಭಗೊಂಡಿದೆ.

ADVERTISEMENT

ಗೂಗಲ್ ಪ್ಲೇ-ಸ್ಟೋರ್‌ನಲ್ಲಿ ಆ್ಯಪ್ ಲಭ್ಯವಿರಲಿದೆ. ರೈಲ್ವೆ ಇದನ್ನು ಸೂಪರ್ ಆ್ಯಪ್ ಎಂದು ವಿಶ್ಲೇಷಿಸಿದೆ.

'ಆರಂಭಿಕ ಹಂತದಲ್ಲಿ ಪರೀಕ್ಷಾರ್ಥ ಬಳಕೆಗಾಗಿ ಸಾವಿರ ಮಂದಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ನಾವು ಪ್ರತಿಕ್ರಿಯೆಗಳನ್ನು ಮೌಲ್ಯಮಾಪನ ಮಾಡಲಿದ್ದೇವೆ. ಬಳಿಕ ಹೆಚ್ಚಿನ ಸಲಹೆಗಾಗಿ 10 ಸಾವಿರ ಮಂದಿಗೆ ಡೌನ್‌ಲೋಡ್‌ಗೆ ಲಭ್ಯವಿರುವಂತೆ ಮಾಡಿಕೊಡಲಾಗುವುದು' ಎಂದು ರೈಲ್ವೆಯ ಅಧಿಕಾರಿ ತಿಳಿಸಿದ್ದಾರೆ.

ಈ ಆ್ಯಪ್ ಟಿಕೆಟ್ ಬುಕ್ಕಿಂಗ್, ಪ್ಲಾಟ್‌ಫಾರ್ಮ್ ಪಾಸ್, ಪಾರ್ಸೆಲ್ ಬುಕ್ಕಿಂಗ್, ಪಿಎನ್‌ಆರ್ ಸ್ಥಿತಿ, ರೈಲು ಸಂಚಾರದ ಸಮಯ ತಿಳಿದುಕೊಳ್ಳುವುದು ಸೇರಿದಂತೆ ಸಮಗ್ರ ಸೇವೆಯನ್ನು ಒದಗಿಸಲಿದೆ.

ತಡೆರಹಿತ ಯೂಸರ್ ಇಂಟರ್‌ಫೆಸ್, ರೈಲ್ವೆಯ ಎಲ್ಲ ಸೇವೆಗಳನ್ನು ಒಂದೇ ಕಡೆ ಲಭ್ಯವಾಗುವಂತೆ ಮಾಡುವುದು ಇದರ ಉದ್ದೇಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಮೊಬೈಲ್ ಅಪ್ಲಿಕೇಷನ್ ಅನ್ನು ಕೇಂದ್ರೀಯ ರೈಲ್ವೆ ಮಾಹಿತಿ ವ್ಯವಸ್ಥೆ (ಸಿಆರ್‌ಐಎಸ್) ಅಭಿವೃದ್ಧಿಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.