ADVERTISEMENT

ಎಂಎಸ್‌ಇಗಳಿಗೆ ಅಡಮಾನ ರಹಿತ ಸಾಲ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 15:53 IST
Last Updated 9 ಫೆಬ್ರುವರಿ 2026, 15:53 IST
<div class="paragraphs"><p>ಸಾಲ (ಸಾಂದರ್ಭಿಕ ಚಿತ್ರ)</p></div>

ಸಾಲ (ಸಾಂದರ್ಭಿಕ ಚಿತ್ರ)

   

–ಗೆಟ್ಟಿ ಚಿತ್ರ

ಮುಂಬೈ: ಅತಿಸಣ್ಣ ಹಾಗೂ ಸಣ್ಣ ಗಾತ್ರದ (ಎಂಎಸ್‌ಇ) ಉದ್ಯಮಗಳಿಗೆ ಬ್ಯಾಂಕ್‌ಗಳು ಯಾವುದೇ ಅಡಮಾನ ಇಲ್ಲದೆ ₹25 ಲಕ್ಷದವರೆಗೆ ಸಾಲ ನೀಡಬಹುದು ಎಂದು ಆರ್‌ಬಿಐ ಸೋಮವಾರ ಹೇಳಿದೆ. ಬ್ಯಾಂಕ್‌ಗಳು ಎಂಎಸ್‌ಇ ಉದ್ಯಮಗಳ ಹಣಕಾಸಿನ ಸ್ಥಿತಿ ಹಾಗೂ ಅವುಗಳ ಹಣಕಾಸಿನ ಹಿನ್ನೆಲೆಯನ್ನು ಪರಿಗಣಿಸಿ ಈ ಸಾಲ ನೀಡಬಹುದಾಗಿದೆ.

ADVERTISEMENT

ಎಂಎಸ್‌ಇ ವಲಯಕ್ಕೆ ಸಾಲ ನೀಡುವುದರ ಕುರಿತ ನಿರ್ದೇಶನಗಳಿಗೆ ಆರ್‌ಬಿಐ ತಿದ್ದುಪಡಿ ತಂದಿದೆ.

‘ಎಂಎಸ್‌ಇ ಉದ್ಯಮಗಳ ಇದುವರೆಗಿನ ಹಣಕಾಸಿನ ಹಿನ್ನೆಲೆ ಪರಿಗಣಿಸಿ, ಅವುಗಳ ಈಗಿನ ಹಣಕಾಸಿನ ಸ್ಥಿತಿ ಪರಿಗಣಿಸಿ ಬ್ಯಾಂಕ್‌ಗಳು ತಮ್ಮ ಆಂತರಿಕ ನೀತಿಗೆ ಅನುಗುಣವಾಗಿ ₹25 ಲಕ್ಷದವರೆಗೆ ಸಾಲವನ್ನು ಅಡಮಾನ ಇಲ್ಲದೆ ಕೊಡಬಹುದು’ ಎಂದು ಹೇಳಿದೆ.

ಲಭ್ಯವಿರುವೆಡೆಗಳಲ್ಲಿ ಬ್ಯಾಂಕ್‌ಗಳು ಸಾಲ ಖಾತರಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಅದು ತಿಳಿಸಿದೆ. ‘ಆದರೆ ಇಲ್ಲಿ ಹೇಳಿರುವ ಮಿತಿಯವರೆಗಿನ ಸಾಲಕ್ಕೆ, ಸಾಲ ಪಡೆಯುವವರು ಸ್ವಇಚ್ಛೆಯಿಂದ ಚಿನ್ನವನ್ನು ಮತ್ತು ಬೆಳ್ಳಿಯನ್ನು ಅಡಮಾನವಾಗಿ ಇರಿಸಿದರೆ ಅದನ್ನು ನಿಯಮಗಳ ಉಲ್ಲಂಘನೆ ಎಂದು ಪರಿಗಣಿಸಲಾಗುವುದಿಲ್ಲ’ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.

ತಿದ್ದುಪಡಿ ಕಂಡಿರುವ ಈ ನಿಯಮಗಳು ಏಪ್ರಿಲ್‌ 1ರಿಂದ ಅನ್ವಯ ಆಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.