ಸಂಜಯ್ ಮಲ್ಹೋತ್ರಾ
ಪಿಟಿಐ ಚಿತ್ರ
ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯು ಶುಕ್ರವಾರ, 5 ವರ್ಷಗಳ ಬಳಿಕ ರೆಪೊ ದರದಲ್ಲಿ ಶೇ0.25ರಷ್ಟು(25 bps) ಕಡಿತಗೊಳಿಸಿದೆ.
ಸದ್ಯ ರೆಪೊ ದರ ಶೇ 6.50ರಷ್ಟಿದ್ದು, ಶೇ 6.25ಕ್ಕೆ ಇಳಿಕೆಯಾಗಲಿದೆ. ಇದರಿಂದ ರೆಪೊ ದರ ಆಧರಿತ ಗೃಹ, ವಾಹನ ಹಾಗೂ ಇತರೆ ಸಾಲ ಪಡೆದವರಿಗೆ ಬಡ್ಡಿದರ ಕಡಿತವಾಗುವ ನಿರೀಕ್ಷೆಯಿದೆ.
2020ರ ಮೇನಲ್ಲಿ ಆರ್‌ಬಿಐ ಬಡ್ಡಿದರ ಪರಿಷ್ಕರಿಸಿತ್ತು. 2023ರ ಫೆಬ್ರುವರಿಯಿಂದ ಸತತ 11 ಸಭೆಗಳಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.