
ಪಿಟಿಐ
ಮುಂಬೈ: ಡಿಜಿಟಲ್ ಪಾವತಿ ಹೆಚ್ಚಳದಿಂದಾಗಿ 2024–25ರ ಆರ್ಥಿಕ ವರ್ಷದಲ್ಲಿ ಎಟಿಎಂಗಳ ಸಂಖ್ಯೆ ಇಳಿಕೆ ಆಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ವರದಿ ಸೋಮವಾರ ತಿಳಿಸಿದೆ.
ಆದರೆ, ಇದೇ ಅವಧಿಯಲ್ಲಿ ಬ್ಯಾಂಕ್‌ನ ಶಾಖೆಗಳು ಶೇ 2ರಷ್ಟು ಹೆಚ್ಚಳಗೊಂಡಿವೆ ಎಂದು ತಿಳಿಸಿದೆ. 2023–24ರ ಮಾರ್ಚ್ ಅಂತ್ಯದ ವೇಳೆಗೆ ದೇಶದಲ್ಲಿ 2,53,417 ಎಟಿಎಂಗಳಿದ್ದವು. ಕಳೆದ ಆರ್ಥಿಕ ವರ್ಷದ ಅಂತ್ಯಕ್ಕೆ ಎಟಿಎಂಗಳ ಸಂಖ್ಯೆ 2,51,057ಕ್ಕೆ ಇಳಿದಿದೆ.
ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಎಟಿಎಂ ಸಂಖ್ಯೆ 1,34,694ರಿಂದ 1,33,544ಕ್ಕೆ ಇಳಿದಿದೆ. ಖಾಸಗಿ ಬ್ಯಾಂಕ್‌ಗಳ ಎಟಿಎಂ 79,884ರಿಂದ 77,117 ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.