ಮುಂಬೈ: ₹2,000 ಮುಖಬೆಲೆಯ ಒಟ್ಟು ₹5,956 ಕೋಟಿ ಮೌಲ್ಯದ ನೋಟುಗಳು ಈಗಲೂ ಜನರ ಕೈಯಲ್ಲಿ ಇವೆ ಎಂದು ಆರ್‌ಬಿಐ ಸೋಮವಾರ ಹೇಳಿದೆ.
ಆರ್‌ಬಿಐ ಈ ಮುಖಬೆಲೆಯ ನೋಟುಗಳನ್ನು 2023ರ ಮೇ 19ರಿಂದ ಚಲಾವಣೆಯಿಂದ ಹಿಂಪಡೆದಿದೆ. ಆದರೆ ಈ ನೋಟುಗಳು ಅಮಾನ್ಯ ಅಲ್ಲ.
2023ರ ಮೇ 19ರಂದು ಚಲಾವಣೆಯಲ್ಲಿ ಇದ್ದ ಈ ಮುಖಬೆಲೆಯ ನೋಟುಗಳ ಒಟ್ಟು ಮೊತ್ತವು ₹3.56 ಲಕ್ಷ ಕೋಟಿ ಆಗಿತ್ತು ಎಂದು ತಿಳಿಸಿದೆ. ಅಂದರೆ, ಈವರೆಗೆ ₹2,000 ಮುಖಬೆಲೆಯ ನೋಟುಗಳ ಪೈಕಿ ಶೇ 98.33ರಷ್ಟು ನೋಟುಗಳು ವಾಪಸ್ ಬಂದಿವೆ.
ಈ ಮುಖಬೆಲೆಯ ನೋಟುಗಳನ್ನು ಬೆಂಗಳೂರು ಸೇರಿದಂತೆ ಆರ್‌ಬಿಐನ 19 ಕಚೇರಿಗಳ ಮೂಲಕ ಬೇರೆ ನೋಟುಗಳಿಗೆ ವಿನಿಮಯ ಮಾಡಿಕೊಳ್ಳಲು ಅವಕಾಶ ಇದೆ. ಸಾರ್ವಜನಿಕರು ಅಂಚೆ ಮೂಲಕ ಈ ನೋಟುಗಳನ್ನು ಆರ್‌ಬಿಐ ಕಚೇರಿಗೆ ಕಳುಹಿಸಿ, ಅದನ್ನು ತಮ್ಮ ಖಾತೆಗೆ ಜಮಾ ಮಾಡುವಂತೆ ಹೇಳಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.