ADVERTISEMENT

ರಿಲಯನ್ಸ್‌ ಜಿಯೊ: ₹ 98, ₹ 149 ಪ್ಲಾನ್‌ ಮತ್ತೆ ಆರಂಭ, ನಿತ್ಯ 1 ಜಿಬಿ ಡೇಟಾ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2019, 13:42 IST
Last Updated 9 ಡಿಸೆಂಬರ್ 2019, 13:42 IST
ರಿಲಯನ್ಸ್‌ ಜಿಯೊ ಹೊಸ ಪ್ರೀಪೇಯ್ಡ್‌ ಪ್ಲಾನ್‌
ರಿಲಯನ್ಸ್‌ ಜಿಯೊ ಹೊಸ ಪ್ರೀಪೇಯ್ಡ್‌ ಪ್ಲಾನ್‌    

ಬೆಂಗಳೂರು:ಇತ್ತೀಚೆಗಷ್ಟೇ ಹೊಸ ಆಲ್‌–ಇನ್‌–ಒನ್‌ ಪ್ಲಾನ್‌ ಶುರು ಮಾಡಿರುವ ರಿಲಯನ್ಸ್‌ ಜಿಯೊ, ಇದೀಗ ಮತ್ತೆ ತನ್ನ ಜನಪ್ರಿಯ ₹ 98 ಮತ್ತು ₹ 149 ಪ್ರೀಪೇಯ್ಡ್‌ ಪ್ಲಾನ್‌ಗಳಿಗೆ ಚಾಲನೆ ನೀಡಿದೆ. ಸೇವಾ ದರ ಹೆಚ್ಚಳದ ಬಳಿಕ ಹಿಂದಿನ ಪ್ಲಾನ್‌ಗಳನ್ನು ಕಂಪನಿ ಹಿಂಪಡೆದಿತ್ತು.

ಹಿಂದಿನ ₹ 98 ಪ್ಲಾನ್‌ ಮುಂದುವರಿಸಿರುವ ಜಿಯೊ, 28 ದಿನಗಳ ವ್ಯಾಲಿಡಿಟಿ ಮತ್ತು 2 ಜಿಬಿ ಡೇಟಾ ನಿಗದಿ ಪಡಿಸಿದೆ. ಜಿಯೊದಿಂದ ಜಿಯೊ ಸಂಖ್ಯೆಗಳಿಗೆ ಅನಿಯಮಿತಿ ಕರೆ, 300 ಎಸ್‌ಎಂಎಸ್‌ ಹಾಗೂ ಜಿಯೊ ಆ್ಯಪ್‌ಗಳ ಬಳಕೆಗೆ ಅವಕಾಶ ನೀಡಿದೆ. ಆದರೆ, ಜಿಯೊ ಹೊರತಾದ ನೆಟ್‌ವರ್ಕ್‌ಗಳಿಗೆ ಕರೆ ಮಾಡಲು ನಿಗದಿತ ಅಥವಾ ಉಚಿತ ಕರೆ ನಿಮಿಷಗಳ ಸೌಲಭ್ಯ ನೀಡಿಲ್ಲ. 2 ಜಿಬಿ ಡೇಟಾ ಮಿತಿ ಪೂರ್ಣಗೊಂಡ ಬಳಿಕ 64 ಕೆಬಿಪಿಎಸ್‌ ನಿಧಾನಗತಿಯ ಡೇಟಾ ಬಳಕೆದಾರರಿಗೆ ಸಿಗುತ್ತದೆ.

₹ 149 ಪ್ಲಾನ್ ರಿಚಾರ್ಜ್‌ ಮಾಡಿಸಿಕೊಂಡರೆ ನಿತ್ಯ 1 ಜಿಬಿ ಡೇಟಾ ಪಡೆಯಬಹುದು. ಜಿಯೊದಿಂದ ಜಿಯೊಗೆ ಅನಿಯಮಿತ ಕರೆ ಹಾಗೂ ಇತರೆ ನೆಟ್‌ವರ್ಕ್‌ಗಳಿಗೆ 300 ನಿಮಿಷ ಕರೆ ಸೌಲಭ್ಯವಿದೆ. ನಿತ್ಯ 100 ಎಸ್‌ಎಂಎಸ್‌ ಮತ್ತು ಜಿಯೊ ಆ್ಯಪ್‌ಗಳನ್ನು ಬಳಸಬಹುದಾಗಿದ್ದು 24 ದಿನಗಳ ವ್ಯಾಲಿಡಿಟಿ ನೀಡಲಾಗಿದೆ.

ADVERTISEMENT

ಇತರೆ ನೆಟ್‌ವರ್ಕ್‌ಗಳಿಗೆ ವಿಧಿಸಲಾದ ಕರೆ ನಿಮಿಷಗಳಗರಿಷ್ಠ ಮಿತಿಯನ್ನು ಸಡಿಲಗೊಳಿಸುತ್ತಿರುವುದಾಗಿಏರ್‌ಟೆಲ್‌ ಮತ್ತು ವೊಡಾಫೋನ್‌ ಐಡಿಯಾ ಪ್ರಕಟಿಸಿದ ಬೆನ್ನಲೇ ಜಿಯೊ ಮತ್ತೆರಡು ಪ್ರೀಪೇಯ್ಡ್‌ ಪ್ಲಾನ್‌ಗಳನ್ನು ಹೊರತಂದಿದೆ. ಏರ್‌ಟೆಲ್‌ ಮತ್ತು ವೊಡಾಫೋನ್‌ 28 ದಿನಗಳ ವ್ಯಾಲಿಡಿಟಿ ಪ್ಲಾನ್‌ಗಳಲ್ಲಿ ಇತರೆ ನೆಟ್‌ವರ್ಕ್‌ಗಳಿಗೆ 1000 ನಿಮಿಷಗಳ ಕರೆ ಮಿತಿ, 84 ದಿನಗಳ ಪ್ಲಾನ್‌ಗಳಲ್ಲಿ 3,000 ನಿಮಿಷಗಳು ಹಾಗೂ 365 ದಿನಗಳ ಪ್ಲಾನ್‌ಗಳಲ್ಲಿ 12,000 ನಿಮಿಷಗಳ ಗರಿಷ್ಠ ಸಮಯ ಮಿತಿ ಪ್ರಕಟಿಸಿದ್ದವು.

ಜಿಯೊ ಡಿ.6ರಂದು ಪ್ರಕಟಿಸಿದ್ದ ಹೊಸ ಪ್ಲಾನ್‌ಗಳ ಪೈಕಿ ₹ 129 ಅಗ್ಗದ ಪ್ಲಾನ್‌ ಹಾಗೂ ಗರಿಷ್ಠ ಸೌಲಭ್ಯ ಹೊಂದಿರುವ ಪ್ಲಾನ್‌ಗಳಲ್ಲಿ ಆರಂಭಿಕ ₹ 199 ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.