ADVERTISEMENT

ನೇತ್ರ ಸಮಸ್ಯೆ: ಮಾರುಕಟ್ಟೆಗೆ ವಬೈಸ್ಮೊ ಚುಚ್ಚುಮದ್ದು ಪರಿಚಯಿಸಿದ ರೋಚೆ ಫಾರ್ಮಾ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2024, 12:38 IST
Last Updated 5 ಮಾರ್ಚ್ 2024, 12:38 IST
<div class="paragraphs"><p>ಸುದ್ದಿಗೋಷ್ಠಿಯಲ್ಲಿ ನಾರಾಯಣ ನೇತ್ರಾಲಯದ ರೆಟಿನಾ ಸೇವಾ ವಿಭಾಗದ ಮುಖ್ಯಸ್ಥೆ ಡಾ.ಚೈತ್ರಾ ಜೈದೇವ್‌ ಮಾತನಾಡಿದರು. ಅಧಿಕಾರಿಗಳಾದ ರಾಜನ್‌ ಮತ್ತು ರಾಹುಲ್‌ ಕಾಮತ್‌ ಹಾಜರಿದ್ದರು</p></div>

ಸುದ್ದಿಗೋಷ್ಠಿಯಲ್ಲಿ ನಾರಾಯಣ ನೇತ್ರಾಲಯದ ರೆಟಿನಾ ಸೇವಾ ವಿಭಾಗದ ಮುಖ್ಯಸ್ಥೆ ಡಾ.ಚೈತ್ರಾ ಜೈದೇವ್‌ ಮಾತನಾಡಿದರು. ಅಧಿಕಾರಿಗಳಾದ ರಾಜನ್‌ ಮತ್ತು ರಾಹುಲ್‌ ಕಾಮತ್‌ ಹಾಜರಿದ್ದರು

   

ಬೆಂಗಳೂರು: ರೋಚೆ ಫಾರ್ಮಾ ಇಂಡಿಯಾ ಕಂಪನಿಯು ನೇತ್ರ ಸಮಸ್ಯೆಯ ಪರಿಹಾರಕ್ಕೆ ಸಂಬಂಧಿಸಿದಂತೆ ವಬೈಸ್ಮೊ (ಫರಿಸಿಮಾಬ್‌) ಎನ್ನುವ ಚುಚ್ಚುಮದ್ದನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. 

ವಬೈಸ್ಮೊಗೆ 2022ರ ಜನವರಿಯಲ್ಲಿ ಯುಎಸ್‌ಎಫ್‌ಡಿಎ ಅನುಮೋದನೆ ನೀಡಿದ್ದು, ಪ್ರಸ್ತುತ 90ಕ್ಕೂ ಹೆಚ್ಚು ದೇಶಗಳಲ್ಲಿ ಲಭ್ಯವಿದೆ. ಸ್ವಿಟ್ಜರ್ಲೆಂಡ್‌ನಲ್ಲಿ ಈ ಔಷಧ ತಯಾರಾಗುತ್ತದೆ. 

ADVERTISEMENT

‘ನಿಯೋವಾಸ್ಕುಲರ್‌ (ಎನ್‌ಎಎಂಡಿ) ಮತ್ತು ಡಯಾಬಿಟಿಕ್‌ ಮ್ಯಾಕುಲರ್‌ ಎಡೆಮಾ (ಡಿಎಂಇ) ಎನ್ನುವ ಎರಡು ರೋಗಗಳಿಗೆ ವಬೈಸ್ಮೊ ಚುಚ್ಚುಮದ್ದಿನ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಕಣ್ಣಿನ ನರದೊಳಗೆ ನೀರು ತುಂಬಿಕೊಂಡಾಗ ಇಲ್ಲವೇ ಊತ ಆದಾಗ ರೋಗಿಗೆ ಸ್ಪಷ್ಟವಾಗಿ ವ್ಯಕ್ತಿ ಇಲ್ಲವೇ ವಸ್ತುಗಳು ಕಾಣುವುದಿಲ್ಲ. ಅಂತಹ ವೇಳೆ ಈ ಔಷಧ ನೀಡಲಾಗುತ್ತದೆ. ಇದರಿಂದ ನರ ಊತ ಬೇಗ ಕಡಿಮೆ ಆಗುತ್ತದೆ. ಇದು ರೋಗಿಯಿಂದ ರೋಗಿಗೆ ಚುಚ್ಚುಮದ್ದು ನೀಡುವ ಪ್ರಮಾಣದಲ್ಲಿ ವ್ಯತ್ಯಾಸ ಇರುತ್ತದೆ’ ಎಂದು ನಾರಾಯಣ ನೇತ್ರಾಲಯದ ರೆಟಿನಾ ಸೇವಾ ವಿಭಾಗದ ಮುಖ್ಯಸ್ಥೆ ಡಾ.ಚೈತ್ರಾ ಜೈದೇವ್‌ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಜಗತ್ತಿನಲ್ಲಿ 200 ಕೋಟಿಗೂ ಹೆಚ್ಚು ಜನರು ದೃಷ್ಟಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳು ಈ ರೋಗದ ಬಗ್ಗೆ ತುಂಬಾ ಎಚ್ಚರಿಕೆ ವಹಿಸಬೇಕು. ವಬೈಸ್ಮೊ ಉತ್ತಮ ಚಿಕಿತ್ಸಾ ಬಾಳಿಕೆ ಮತ್ತು ಹೊಂದಿಕೊಳ್ಳುವ ಔಷಧವಾಗಿದೆ ಎಂದರು.

ರೋಚೆ ಫಾರ್ಮಾ ಇಂಡಿಯಾದ ಮುಖ್ಯ ವೈದ್ಯಕೀಯ ಅಧಿಕಾರಿ ಡಾ.ವಿರಾಜ್‌ ಸುವರ್ಣ ಮಾತನಾಡಿ, ಜನರು ನೇತ್ರಗಳನ್ನು ಕಾಪಾಡಿಕೊಳ್ಳಲು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ಇಲ್ಲದೇ ಇದ್ದಲ್ಲಿ ದೃಷ್ಟಿ ದೋಷಕ್ಕೆ ಕಾರಣವಾಗುವ ಸಾಧ್ಯತೆ ಇರುತ್ತದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ರೋಚೆಯ ಅಧಿಕಾರಿಗಳಾದ ರಾಜನ್‌ ಎಸ್‌. ಮತ್ತು ರಾಹುಲ್‌ ಕಾಮತ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.