ADVERTISEMENT

ರೂಪಾಯಿ ಮೌಲ್ಯ ವರ್ಷದಲ್ಲಿ ಶೇ 5ರಷ್ಟು ಕುಸಿತ; ಇಳಿಕೆಯತ್ತ ದೇಶದ ವೃದ್ಧಿ ದರ

ಏಜೆನ್ಸೀಸ್
Published 25 ನವೆಂಬರ್ 2019, 7:57 IST
Last Updated 25 ನವೆಂಬರ್ 2019, 7:57 IST
ರೂಪಾಯಿ ಮೌಲ್ಯ ಕುಸಿತ
ರೂಪಾಯಿ ಮೌಲ್ಯ ಕುಸಿತ   

ಭಾರತದ ಆರ್ಥಿಕತೆ ಆರು ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ ಎಂಬುದಕ್ಕೆ ಸಾಕ್ಷಿಯಂತೆ ರೂಪಾಯಿ ಮೌಲ್ಯವೂ ನಿರಂತರ ಕುಸಿತ ಕಂಡಿದೆ.ಏಷ್ಯಾದ ಉತ್ತೇಜನಗೊಳ್ಳುತ್ತಿರುವ ಕರೆನ್ಸಿಗಳ ಪೈಕಿ ಪ್ರಸಕ್ತ ತ್ರೈಮಾಸಿಕದಲ್ಲಿ ಕುಸಿತದತ್ತ ಸಾಗಿರುವ ಕರೆನ್ಸಿ ಭಾರತದ ರೂಪಾಯಿ ಎಂದು ಬ್ಲೂಮ್‌ಬರ್ಗ್‌ ವರದಿ ಮಾಡಿದೆ.

ಈ ವರ್ಷ ರೂಪಾಯಿ ಮೌಲ್ಯ ಶೇ 5ರಷ್ಟು ಇಳಿಕೆಯಾಗಿದೆ.ಆರ್ಥಿಕ ಪ್ರಗತಿಯಲ್ಲಿನ ಮಂದಗತಿಯು ನಿರೀಕ್ಷೆಗಿಂತ ಹೆಚ್ಚಿನ ಅವಧಿಗೆ ಮುಂದುವರೆಯಲಿದೆ. ಹೀಗಾಗಿ ಹಿಂದೆ ಅಂದಾಜಿಸಿದ್ದ ಶೇ 5.8ರಷ್ಟು ವೃದ್ಧಿ ದರದ ಮುನ್ನೋಟವನ್ನು ಮೂಡೀಸ್‌ ಇನ್‌ವೆಸ್ಟರ್ಸ್‌ ಸರ್ವಿಸ್‌ ಕೆಳಮುಖವಾಗಿ ಪರಿಷ್ಕರಿಸಿತ್ತು. ವೃದ್ಧಿ ದರವು ಶೇ 4.2ಕ್ಕೆ ಕುಸಿಯಲಿದೆ ಎಂದುಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಸಹ ಅಂದಾಜಿಸಿದೆ.

'ಅಭಿವೃದ್ಧಿ ಕುಂಠಿತಗೊಂಡಿರುವುದು ಭಾರತಕ್ಕೆ ಬಹುದೊಡ್ಡ ತಡೆಯಾಗಿದೆ. ಅಭಿವೃದ್ಧಿಗೆ ಪೂರಕವಲ್ಲದ ವಾತಾವರಣದ ಪರಿಣಾಮದಿಂದ ಬಂಡವಾಳ ಹರಿಯುವಿಕೆಯು ಇಳಿಕೆಯಾಗಬಹುದು. ಇದು ಕರೆನ್ಸಿ ಮೌಲ್ಯದ ಮೇಲೆ ಪ್ರಭಾವ ಬೀರುತ್ತದೆ‘ ಎಂದು ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ ಲಿಮಿಟೆಡ್‌ನ ಮುಖ್ಯ ಆರ್ಥಿಕತಜ್ಞ ಇಂದ್ರಾನಿಲ್‌ ಪಾನ್‌ ಅಭಿಪ್ರಾಯ ಪಟ್ಟಿದ್ದಾರೆ.

ADVERTISEMENT

ನವೆಂಬರ್‌ ಆರಂಭದಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ ₹72.2425ಕ್ಕೆ ಕುಸಿದಿತ್ತು. ಸೆಪ್ಟೆಂಬರ್‌ನಲ್ಲಿ ₹72.4075ಕ್ಕೆ ಇಳಿದಿತ್ತು. ಸೋಮವಾರ ರೂಪಾಯಿ ಮೌಲ್ಯ₹71.6425 ಇದೆ.

ನವೆಂಬರ್‌ 29ರಂದು ಭಾರತ ಸರ್ಕಾರ ಆರ್ಥಿಕ ವೃದ್ಧಿ ದರ(ಜಿಡಿಪಿ) ವರದಿಯನ್ನು ಪ್ರಕಟಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.