ADVERTISEMENT

Dollar vs Rupee: ರೂಪಾಯಿ ಮೌಲ್ಯ ಚೇತರಿಕೆ

ಪಿಟಿಐ
Published 14 ಜನವರಿ 2025, 12:34 IST
Last Updated 14 ಜನವರಿ 2025, 12:34 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ: ಅಮೆರಿಕದ ಡಾಲರ್‌ ಎದುರು ಸತತವಾಗಿ ಇಳಿಕೆ ಕಂಡಿದ್ದ ರೂಪಾಯಿ ಮೌಲ್ಯವು ಮಂಗಳವಾರದ ವಹಿವಾಟಿನಲ್ಲಿ 8 ಪೈಸೆ ಏರಿಕೆಯಾಗಿದೆ. ಪ್ರತೀ ಡಾಲರ್‌ ಮೌಲ್ಯವು ₹86.62 ಆಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿನ ಏರಿಕೆ ಹಾಗೂ ದೇಶೀಯ ಷೇರುಪೇಟೆಯಿಂದ ವಿದೇಶಿ ಬಂಡವಾಳದ ಹೊರಹರಿವಿನ ಹೆಚ್ಚಳದಿಂದಾಗಿ ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿಯು ಒತ್ತಡಕ್ಕೆ ಸಿಲುಕಿತ್ತು. ಸದ್ಯ ಷೇರುಪೇಟೆಯು ಚೇತರಿಕೆ ಕಂಡಿದ್ದರಿಂದ ರೂಪಾಯಿ ಮೌಲ್ಯ ಏರಿಕೆಯಾಗಿದೆ. 

ವಹಿವಾಟಿನ ಆರಂಭದಲ್ಲಿ ರೂಪಾಯಿ ಮೌಲ್ಯವು ₹86.57 ಇತ್ತು. ಇಂಟ್ರಾಡೇನಲ್ಲಿ ₹86.45ಗೆ ತಲುಪಿತ್ತು. 

ADVERTISEMENT

ಸೋಮವಾರದ ವಹಿವಾಟಿನಲ್ಲಿ 66 ಪೈಸೆ ಇಳಿಕೆ ಕಂಡಿತ್ತು.

‘ಚಿಲ್ಲರೆ ಹಣದುಬ್ಬರ ಇಳಿಕೆಯಾಗಿದೆ. ಇದು ರೂಪಾಯಿ ಮೌಲ್ಯವು ಏರಿಕೆಗೆ ನೆರವಾಗಿದೆ. ಆದರೆ, ಕಚ್ಚಾ ತೈಲದ ಬೆಲೆ ಏರಿಕೆಯು ಮುಂದುವರಿದಿದ್ದು, ಹಣದುಬ್ಬರ ಹೆಚ್ಚಳಕ್ಕೆ ಕಾರಣವಾಗಲಿದೆ. ಹಾಗಾಗಿ, ರೂಪಾಯಿ ಮೌಲ್ಯದ ಕುಸಿತ ಮುಂದುವರಿಯುವ ಸಾಧ್ಯತೆಯಿದೆ’ ಎಂದು ಮಿರೇ ಅಸೆಟ್‌ ಶೇರ್ಖಾನ್‌ ಸಂಸ್ಥೆಯ ಸಂಶೋಧನಾ ವಿಶ್ಲೇಷಕ ಅನುಜ್ ಚೌಧರಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.