ರೂಪಾಯಿ ಮೌಲ್ಯ
Credit: iStock Image
ಮುಂಬೈ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಇಂದು (ಬುಧವಾರ) ನಡೆದ ವಹಿವಾಟಿನಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು 12 ಪೈಸೆ ಏರಿಕೆಯಾಗಿದೆ. ಪ್ರತಿ ಡಾಲರ್ ಬೆಲೆ ₹86.44 ಆಗಿದೆ.
ಕಳೆದ ನಾಲ್ಕು ವಹಿವಾಟಿನ ದಿನಗಳಲ್ಲಿ ರೂಪಾಯಿ ಮೌಲ್ಯ 79 ಪೈಸೆ ಹೆಚ್ಚಳವಾಗಿದೆ.
ದೇಶೀಯ ಷೇರು ಸೂಚ್ಯಂಕಗಳ ಏರಿಕೆ ಮತ್ತು ಡಾಲರ್ ಮೌಲ್ಯ ಇಳಿಕೆಯು ರೂಪಾಯಿ ಬಲಗೊಳ್ಳಲು ನೆರವಾಗಿದೆ. ಏಷ್ಯಾದ ಕರೆನ್ಸಿಗಳ ಮೌಲ್ಯ ಏರಿಕೆಯೂ ರೂಪಾಯಿ ಸದೃಢಕ್ಕೆ ಸಹಕಾರಿಯಾಗಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.