ADVERTISEMENT

ಅಮೆರಿಕ ಡಾಲರ್ ಎದುರು 35 ಪೈಸೆ ಏರಿಕೆ ಕಂಡ ಭಾರತದ ರೂಪಾಯಿ ಮೌಲ್ಯ

ಪಿಟಿಐ
Published 26 ಮೇ 2025, 11:03 IST
Last Updated 26 ಮೇ 2025, 11:03 IST
ರೂಪಾಯಿ ಮೌಲ್ಯ ಕುಸಿತ ಸಾಧ್ಯತೆ
ರೂಪಾಯಿ ಮೌಲ್ಯ ಕುಸಿತ ಸಾಧ್ಯತೆ   

ಮುಂಬೈ: ಸತತ ಎರಡನೇ ದಿನವೂ ಅಮೆರಿಕ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಏರಿಕೆ ದಾಖಲಿಸಿದೆ. ದಿನದ ವಹಿವಾಟು ಅಂತ್ಯಕ್ಕೆ ಅಮೆರಿಕ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ 35 ಪೈಸೆಯಷ್ಟು ಏರಿಕೆ ಕಂಡು ₹85.10ಕ್ಕೆ ಸ್ಥಿರಗೊಂಡಿತು.

ದೇಶೀಯ ಷೇರುಪೇಟೆಗಳಲ್ಲಿ ಸಕಾರಾತ್ಮಕ ಪ್ರವೃತ್ತಿ ಮತ್ತು ವಿದೇಶಿ ವಿನಿಮಯದಲ್ಲಿ ದುರ್ಬಲಗೊಂಡ ಅಮೆರಿಕ ಕರೆನ್ಸಿ ಈ ಬೆಳವಣಿಗೆಗೆ ಕಾರಣವಾಗಿದೆ.

ವಿದೇಶಿ ವಿನಿಮಯ ವ್ಯಾಪಾರಿಗಳ ಪ್ರಕಾರ, ವಿದೇಶಿ ನಿಧಿಗಳ ಒಳಹರಿವು ಮತ್ತು 2025ರ ಹಣಕಾಸು ವರ್ಷದಲ್ಲಿ ಸರ್ಕಾರಕ್ಕೆ ₹2.69 ಲಕ್ಷ ಕೋಟಿ ದಾಖಲೆಯ ಲಾಭಾಂಶವನ್ನು ನೀಡುವ ಆರ್‌ಬಿಐ ಘೋಷಣೆಯು ಸ್ಥಳೀಯ ಕರೆನ್ಸಿಗೆ ಬಲ ನೀಡಿದೆ. ಕಚ್ಚಾ ತೈಲ ಬೆಲೆಗಳಲ್ಲಿ ಸ್ವಲ್ಪ ಚೇತರಿಕೆಯು ಸಹ ಪರಿಣಾಮ ಬೀರಿದೆ.

ADVERTISEMENT

ಅಂತರಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ₹85.02ಕ್ಕೆ ಆರಂಭವಾಗಿತ್ತು. ದಿನದ ವಹಿವಾಟಿನಲ್ಲಿ ಡಾಲರ್ ಎದುರು ಗರಿಷ್ಠ ₹84.78 ಮತ್ತು ₹85.18ರ ಕನಿಷ್ಠ ಮಟ್ಟಗಳ ನಡುವೆ ವ್ಯವಹಾರ ನಡೆಸಿತು. ಅಂತಿಮವಾಗಿ, ಹಿಂದಿನ ಮುಕ್ತಾಯಕ್ಕಿಂತ 35 ಪೈಸೆ ಏರಿಕೆ ಕಂಡಿತು.

ಶುಕ್ರವಾರ, ಅಮೆರಿಕ ಡಾಲರ್ ವಿರುದ್ಧ ರೂಪಾಯಿ ಮೌಲ್ಯ 50 ಪೈಸೆ ಏರಿಕೆಯಾಗಿ ₹85.45ಕ್ಕೆ ಮುಕ್ತಾಯವಾಗಿತ್ತು.

ಏಪ್ರಿಲ್‌ ತಿಂಗಳ ಕೈಗಾರಿಕಾ ಮತ್ತು ಉತ್ಪಾದನಾ ಉತ್ಪಾದನಾ ದತ್ತಾಂಶ, ತ್ರೈಮಾಸಿಕದ ಜಿಡಿಪಿ ಬೆಳವಣಿಗೆಯ ವರದಿ ಈ ವಾರ ಬಿಡುಗಡೆಯಾಗಲಿರುವುದು ಕರೆನ್ಸಿ ಮೇಲೆ ಪರಿಣಾಮ ಬೀರಿದೆ.

ದೇಶೀಯ ಮಾರುಕಟ್ಟೆಗಳ ಸಕಾರಾತ್ಮಕ ಬೆಳವಣಿಗೆ ಮತ್ತು ದುರ್ಬಲ ಅಮೆರಿಕ ಡಾಲರ್ ಸೂಚ್ಯಂಕದ ಪರಿಣಾಮವಾಗಿ ರೂಪಾಯಿ ಮೌಲ್ಯ ಏರಿಕೆಯಾಗಿದೆ ಎಂದು ಮಿರೇ ಅಸೆಟ್ ಶೇರ್‌ಖಾನ್‌ನ ಸಂಶೋಧನಾ ವಿಶ್ಲೇಷಕ ಅನುಜ್ ಚೌಧರಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.