ADVERTISEMENT

ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರು 39 ಪೈಸೆ ಏರಿಕೆ ಕಂಡ ರೂಪಾಯಿ ಮೌಲ್ಯ

ಪಿಟಿಐ
Published 5 ಮೇ 2025, 6:14 IST
Last Updated 5 ಮೇ 2025, 6:14 IST
ರೂಪಾಯಿ ಮೌಲ್ಯ ಕುಸಿತ ಸಾಧ್ಯತೆ
ರೂಪಾಯಿ ಮೌಲ್ಯ ಕುಸಿತ ಸಾಧ್ಯತೆ   

ಮುಂಬೈ,: ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಅಮೆರಿಕ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ 39 ಪೈಸೆ ಏರಿಕೆಯಾಗಿ 84.18ಕ್ಕೆ ತಲುಪಿದೆ. ವಿದೇಶಿ ಹೂಡಿಕೆಯ ಒಳಹರಿವು ಮುಂದುವರಿದಿರುವುದರಿಂದ ದೇಶೀಯ ಕರೆನ್ಸಿ ಮೌಲ್ಯ ಹೆಚ್ಚಳಕ್ಕೆ ಕಾರಣವಾಗಿದೆ.

ಕಚ್ಚಾ ತೈಲ ಬೆಲೆಗಳಲ್ಲಿನ ತೀವ್ರ ಕುಸಿತ ಮತ್ತು ದೇಶೀಯ ಷೇರುಗಳಲ್ಲಿನ ಸಕಾರಾತ್ಮಕ ಪ್ರವೃತ್ತಿ ಹೂಡಿಕೆದಾರರನ್ನು ಮತ್ತಷ್ಟು ಉತ್ಸಾಹಭರಿತರನ್ನಾಗಿ ಮಾಡಿದೆ ಎಂದು ವರದಿ ತಿಳಿಸಿದೆ.

ಒಪೆಕ್‌ + ಮುಂಬರುವ ತಿಂಗಳುಗಳಲ್ಲಿ ಉತ್ಪಾದನೆಯನ್ನು ಮತ್ತಷ್ಟು ಹೆಚ್ಚಿಸುವುದಾಗಿ ವಾರಾಂತ್ಯದಲ್ಲಿ ಸೂಚಿಸಿದ ನಂತರ ಬೆಳಿಗ್ಗೆ ಏಷ್ಯನ್ ವ್ಯಾಪಾರದಲ್ಲಿ ಬ್ರೆಂಟ್ ಕಚ್ಚಾ ತೈಲ ಬೆಲೆಗಳು ಸುಮಾರು ಶೇ 4 ರಷ್ಟು ಕುಸಿದವು.

ADVERTISEMENT

ಅಂತರಬ್ಯಾಂಕ್ ವಿದೇಶಿ ವಿನಿಮಯದಲ್ಲಿ ರೂಪಾಯಿ ₹84.45ರಿಂದ ವಹಿವಾಟು ಆರಂಭಿಸಿತು. ಬಳಿಕ. ₹84.47ರವರೆಗೂ ತಲುಪಿತ್ತು.

ಶುಕ್ರವಾರ, ರೂಪಾಯಿ ಮೌಲ್ಯ ಹೆಚ್ಚಿನ ಏರಿಳಿತವನ್ನು ಕಂಡಿತ್ತು. ಏಳು ತಿಂಗಳ ಗರಿಷ್ಠ ಮಟ್ಟವನ್ನು ತಲುಪಿತ್ತು.

ಕಳೆದ ವಾರ ಭಾರತೀಯ ರೂಪಾಯಿ ಮೌಲ್ಯದಲ್ಲಿ ಬಹಳಷ್ಟು ಏರಿಳಿತ ಕಂಡುಬಂದಿದ್ದು, ಮಾರುಕಟ್ಟೆ ಸ್ಥಾನಗಳಲ್ಲಿನ ಬದಲಾವಣೆ, ಸ್ಥಿರ ಬಂಡವಾಳದ ಒಳಹರಿವು ಮತ್ತು ಫಾರೆಕ್ಸ್ ಕ್ಷೇತ್ರದಲ್ಲಿ ರಿಸರ್ವ್ ಬ್ಯಾಂಕ್‌ನ ಮಾರ್ಪಾಡು ಕ್ರಮಗಳಿಂದಾಗಿ ಇದು ಸಂಭವಿಸಿದೆ ಎಂದು ಸಿಆರ್ ಫಾರೆಕ್ಸ್ ಅಡ್ವೈಸರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಅಮಿತ್ ಪಬಾರಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.