ಮುಂಬೈ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯವು ಸೋಮವಾರದ ವಹಿವಾಟಿನಲ್ಲಿ 37 ಪೈಸೆ ಏರಿಕೆ ಆಗಿದೆ. ಪ್ರತೀ ಡಾಲರ್ ಮೌಲ್ಯ ₹85.61 ಆಗಿದೆ.
ವಿದೇಶಿ ಬಂಡವಾಳ ಒಳಹರಿವು, ದೇಶದ ಷೇರುಪೇಟೆ ಸೂಚ್ಯಂಕಗಳ ಏರಿಕೆ ರೂಪಾಯಿ ಮೌಲ್ಯದ ಸದೃಢತೆಗೆ ನೆರವಾಯಿತು ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
ಕಳೆದ ಏಳು ದಿನದ ವಹಿವಾಟಿನಲ್ಲಿ ರೂಪಾಯಿ ಮೌಲ್ಯ 154 ಪೈಸೆ ಏರಿಕೆ ಆಗಿದೆ. 2024ರ ಡಿಸೆಂಬರ್ 31ರಂದು ರೂಪಾಯಿ ಮೌಲ್ಯ ₹85.64 ಆಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.