ಬೆಂಗಳೂರು: ಪಾದರಕ್ಷೆಗಳ ಪ್ರಮುಖ ಬ್ರ್ಯಾಂಡ್ ಆಗಿರುವ ವಾಕ್‌ಮೇಟ್ ಇಂಡಿಯಾ ಕಂಪನಿಗೆ, ಕ್ರಿಕೆಟಿಗ ಸಂಜು ಸ್ಯಾಮ್ಸನ್ ಅವರು ಹೊಸ ರಾಯಭಾರಿಯಾಗಿ ನೇಮಕವಾಗಿದ್ದಾರೆ.
‘ಪ್ರಾದೇಶಿಕ ಕಂಪನಿಯಾದ ವಾಕ್‌ಮೇಟ್ ಜಾಗತಿಕ ಮಾರುಕಟ್ಟೆಗೆ ತನ್ನ ವಹಿವಾಟು ವಿಸ್ತರಿಸಿದೆ. ಸಂಜು ಸ್ಯಾಮ್ಸನ್ ಅವರು ಹೊಸ ರಾಯಭಾರಿ ಆಗಿರುವುದು ಖುಷಿ ತಂದಿದೆ’ ಎಂದು ಕಂಪನಿಯ ನಿರ್ದೇಶಕ ರೋಷನ್ ಬಾಸ್ಟೈನ್ ಹೇಳಿದ್ದಾರೆ.
ಗ್ರಾಹಕರ ಅಗತ್ಯತೆಗೆ ಅನುಗುಣವಾಗಿ ಬಾಳಿಕೆ ಬರುವ ಹಾಗೂ ಕೈಗೆಟಕುವ ದರದಲ್ಲಿ ಪಾದರಕ್ಷೆಗಳನ್ನು ಒದಗಿಸಲು ಬದ್ಧವಾಗಿದೆ. ಎಲ್ಲಾ ವಯೋಮಾನದವರನ್ನು ಗಮನದಲ್ಲಿಟ್ಟುಕೊಂಡು ಹೊಸ ವಿನ್ಯಾಸ ಹಾಗೂ ಆರಾಮದಾಯಕವಾದ ಪಾದರಕ್ಷೆಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ದುಬೈನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಹೊಸ ಜಾಹೀರಾತನ್ನು ಬಿಡುಗಡೆ ಮಾಡಲಾಯಿತು.
‘ವಾಕ್‌ಮೇಟ್‌ನ ಹೊಸ ಪಾದರಕ್ಷೆಗಳ ವಿನ್ಯಾಸ ಮತ್ತು ತಯಾರಿಕೆಯಲ್ಲಿ ಬಳಕೆದಾರಸ್ನೇಹಿಯಾದ ಸುಧಾರಿತ ತಂತ್ರಜ್ಞಾನ ಬಳಸಲಾಗಿದೆ. ಈ ಪಾದರಕ್ಷೆಗಳನ್ನು ಧರಿಸಲು ಉತ್ಸುಕನಾಗಿದ್ದೇನೆ’ ಎಂದು ಸಂಜು ಸ್ಯಾಮ್ಸನ್ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.