ADVERTISEMENT

ಎಸ್‌ಬಿಐ ಗೃಹ ಸಾಲದ ಬಡ್ಡಿದರ ಶೇ 6.70ಕ್ಕೆ ಇಳಿಕೆ

ಪಿಟಿಐ
Published 1 ಮೇ 2021, 13:00 IST
Last Updated 1 ಮೇ 2021, 13:00 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಗೃಹ ಸಾಲದ ಬಡ್ಡಿದರವನ್ನು ಶೇ 6.70ಕ್ಕೆ ತಗ್ಗಿಸಿದೆ.

ಮಾರ್ಚ್‌ 31ರವರೆಗೂ ಶೇ 6.70ರ ಆರಂಭಿಕ ಬಡ್ಡಿದರ ನೀಡಿದ್ದ ಬ್ಯಾಂಕ್‌ ಏಪ್ರಿಲ್‌ 1 ರಿಂದ ಜಾರಿಗೆ ಬರುವಂತೆ ಗೃಹ ಸಾಲದ ಬಡ್ಡಿದರವನ್ನು ಶೇ 6.95ಕ್ಕೆ ನಿಗದಿಪಡಿಸಿತ್ತು. ಇದೀಗ ಮತ್ತೆ ಬಡ್ಡಿದರ ತಗ್ಗಿಸಿದೆ.

₹30 ಲಕ್ಷದವರೆಗಿನ ಗೃಹ ಸಾಲದ ಮೊತ್ತಕ್ಕೆ ಶೇ 6.70ರಷ್ಟು ಬಡ್ಡಿದರವು ಅನ್ವಯಿಸಲಿದೆ. ₹ 30 ಲಕ್ಷದಿಂದ ₹ 75 ಲಕ್ಷದವರೆಗಿನ ಮೊತ್ತಕ್ಕೆ ಶೇ 6.95ರಷ್ಟು ಬಡ್ಡಿದರ ಅನ್ವಯ ಆಗಲಿದೆ ಎಂದು ತಿಳಿಸಿದೆ.

ADVERTISEMENT

ಮಹಿಳೆಯರಿಗೆ ಶೇ 0.05ರಷ್ಟು ವಿಶೇಷ ವಿನಾಯಿತಿ ಇದೆ. ಯುನೊ ಆ್ಯಪ್‌ ಮೂಲಕ ಸಾಲಕ್ಕೆ ಅರ್ಜಿ ಸಲ್ಲಿಸುವವರಿಗೆ ಹೆಚ್ಚುವರಿಯಾಗಿ ಶೇ 0.05ರಷ್ಟು ವಿನಾಯಿತಿ ಸಿಗಲಿದೆ ಎಂದೂ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.