ಮುಂಬೈ: ರೆಪೊ ದರ ಅಧರಿಸಿದ ಬದಲಾಗುವ ಗೃಹ ಸಾಲಗಳ ಮೇಲಿನ ಬಡ್ಡಿ ದರವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇ 0.30ರಷ್ಟು ಹೆಚ್ಚಿಸಿದೆ.
ಆಸ್ತಿ ಅಡಮಾನ ಇರಿಸಿ ಪಡೆಯುವ ವೈಯಕ್ತಿಕ ಸಾಲದ ಮೇಲಿನ ಬಡ್ಡಿ ದರವನ್ನೂ ಶೇ 0.30ರಷ್ಟು ಹೆಚ್ಚಿಸಿದೆ. ಹೊಸ ಬಡ್ಡಿ ದರಗಳು ಈ ತಿಂಗಳ 1ರಿಂದಲೇ ಅನ್ವಯಗೊಳ್ಳಲಿವೆ.
ಕೊರೊನಾದಿಂದ ವ್ಯಕ್ತಿಗಳು ಮತ್ತು ಕಂಪನಿಗಳಿಗೆ ವರಮಾನದ ಮೂಲಗಳೇ ಬತ್ತಿ ಹೋಗಿವೆ. ಹೀಗಾಗಿ ಸಾಲ ಮರುಪಾವತಿ ವಿಳಂಬವಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ರೆಪೊ ದರ ಆಧರಿಸಿದ ಸಾಲದ ಬಡ್ಡಿಗೆ ಅನ್ವಯಿಸುವ ಅಪಾಯದ ಹೊರೆಯನ್ನು (ರಿಸ್ಕ್ ಪ್ರೀಮಿಯಂ) ಶೇ 0.20ರಷ್ಟು ಹೆಚ್ಚಿಸಿದೆ.
₹ 30 ಲಕ್ಷದಿಂದ ₹ 75 ಲಕ್ಷವರೆಗಿನ ಸಾಲದ ಬಡ್ಡಿ ದರ ಶೇ 7.45ರಿಂದ ಶೇ 7.65ಕ್ಕೆ ಏರಿಕೆಯಾಗಿದೆ.ಓವರ್‌ಡ್ರಾಫ್ಟ್ ಆಧರಿಸಿದ ಗೃಹಸಾಲದ (ಮ್ಯಾಕ್ಸ್‌ಗೇನ್ ಸಾಲ) ಬಡ್ಡಿದರವನ್ನು ಶೇ 0.30ರಷ್ಟು ಹೆಚ್ಚಿಸಲಾಗಿದೆ. ದೇಶದ ಅತಿದೊಡ್ಡ ಬ್ಯಾಂಕ್ ಕೈಗೊಂಡ ನಿರ್ಧಾರವನ್ನು ಇತರ ಬ್ಯಾಂಕ್‌ಗಳೂಅನುಸರಿಸುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.